ದಾವಣಗೆರೆ: ಒಎಲ್‌ಎಕ್ಸ್‌ನಲ್ಲಿ ಮನೆ ಬಾಡಿಗೆಗೆ ಇದೆ ಎಂದು ಜಾಹೀರಾತು ನೀಡಿ ಮಹಿಳೆಯೊಬ್ಬರು ಬರೋಬ್ಬರಿ 4.50 ಲಕ್ಷ ಕಳೆದುಕೊಂಡಿದ್ದಾರೆ.
ನಗರದ ನಿಟುವಳ್ಳಿ ನಿವಾಸಿ ಲೀಲಾ ಹಾವೇರಿ ಹಣ ಕಳೆದುಕೊಂಡ ಮಹಿಳೆಯಾಗುದ್ದಾರೆ . ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ನೋಡಿದ ಅಪರಿಚಿತನೊಬ್ಬ ಪಾನ್, ಆಧಾರ್ ಕಾರ್ಡ್ ಅನ್ನು ವಾಟ್ಸಾಪ್ ಮೂಲಕ 10,000 ಹಾಕುತ್ತೇನೆ ಎಂದು ನಂಬುಸಿ ಆಧಾರ್ ಹಾಗೂ ಪಾನ್ ಕಾರ್ಡ್ ಪಡೆದು ವಂಚನೆ ಮಾಡಿದ್ದಾರೆ. ದಾಖಲೆ ಪಡೆದುಕೊಂಡ ಅಪರಿಚಿತ ವ್ಯಕ್ತಿಗಳು ಲೀಲಾ ಅವರ ಎಸ್‌ಬಿಐ ಖಾತೆಗೆ ಎಸ್‌ಬಿಐ ಯೊನೊ ಆ್ಯಪ್ ಕ್ವಿಕ್ ಪೇ ಮೂಲಕ 10 ಹಣ ಹಾಕಿದ್ದಾನೆ. ಇದಾದ ಬಳಿಕ ಲೀಲಾ ಅವರ ಎಸ್‌ಬಿಐ ಖಾತೆಯಿಂದ ಹಂತ ಹಂತವಾಗಿ 4.50 ಲಕ್ಷವನ್ನು ಆನ್‌ಲೈನ್ ಮುಖಾಂತರ ಅಪರಿಚಿತ ವ್ಯಕ್ತಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.