ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಮತದಾರರಿಗೆ ಗಣೇಶ ವಿಗ್ರಹ ಹಂಚುತ್ತಿದ್ದವರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಾಗಿದೆ.
ದಾವಣಗೆರೆ ಎಸ್ ಜೆ ಎಂ ನಗರದ 16ನೇ ಕ್ರಾಸ್ ನಲ್ಲಿ ಯಾರೋ ಹುಡುಗರು ಮತದಾರರಿಗೆ ಆಮಿಷ ಒಡ್ಡಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಬೆಳ್ಳಿಯ ಗಣೇಶ ವಿಗ್ರಹಗಳನ್ನು ಹಂಚುತ್ತಿರುವ ಬಗ್ಗೆ ಗಿರೀಶ್ ಎಂಬುವರ ಮಾಹಿತಿ ನೀಡಿದ್ದರು. ಈ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ದಕ್ಷಿಣ ವಿಭಾಗದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಗ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದ ಹುಡುಗನನ್ನು ಹಿಡಿದು ವಿಚಾರಿಸಲಾಗಿದೆ. ಆ ಹುಡುಗ ಹಿರೇಕೆರೂರಿನ ತೇಜಸ್ (22 ) ಎಂದು ತಿಳಿಸಿದ್ದು, ಅವನ ಬಳಿ 2 ಚಿಕ್ಕ ಬೆಳ್ಳಿಯ ಗಣೇಶ ಮೂರ್ತಿಗಳು ಪತ್ತೆಯಾಗಿವೆ.
ಹೆಚ್ಚಿನ ವಿಚಾರಣೆ ಮಾಡಲಾಗಿದ್ದು, ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಪರವಾಗಿ ಮತದಾರರಿಗೆ ಆಮಿಷ ಒಡ್ಡಲು ತೆಗೆದುಕೊಂಡು ಹೋಗಿದ್ದೇವು ಎಂದು ತಿಳಸಿದ್ದಾನೆ. ಗಣೇಶ ಮೂರ್ತಿ ಗಳನ್ನು ವಶಕ್ಕೆ ಪಡೆದು, ಈ ಸಂಬಂಧ ನ್ಯಾಯಾಲಯ ಅನುಮತಿ ಪಡೆದು ಗಾಂಧಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ಕೈಗೊಂಡಿರುತ್ತೆ.