ದಾವಣಗೆರೆ; ಆರ್ ಟಿಓ ಸಿಬ್ಬಂದಿ ಜೊತೆ ಸೇರಿ ಕಳ್ಳತನ ಮಾಡಿದ್ದ ಬೈಕ್ ಆರ್ ಸಿ ನಂಬರ್ ಬದಲಾಯಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಪತ್ತೆ; 13 ಲಕ್ಷ ಮೌಲ್ಯದ 26 ಬೈಕ್‌ಗಳು ವಶ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ದಾವಣಗೆರೆ; ಆರ್ ಟಿಓ ಕಚೇರಿ ಸಿಬ್ಬಂದಿ ಜೊತೆ ಸೇರಿ ಕಳ್ಳತನ ಮಾಡಿದ್ದ ಬೈಕ್ ಆರ್ ಸಿ ನಂಬರ್ ಬದಲಾಯಿಸಿ ಮಾರಾಟ ಮಾಡುತ್ತಿದ್ದ ಐವರ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ಪತ್ತೆ ಮಾಡಿದ್ದು, 13 ಲಕ್ಷ ಮೌಲ್ಯದ 26 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಮಾ.16 ರಂದು ಮಧ್ಯಾಹ್ನ ಅವಧಿಯಲ್ಲಿ ಹೊನ್ನಾಳಿ ಪಟ್ಟಣದ ಟಿ.ಬಿ.ಸರ್ಕಲ್ ಬಳಿ ಇರುವ ತೊಟಗಾರಿಕೆ ಇಲಾಖೆ ಕಛೇರಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕೆ.ಎ-17/ಹೆಚ್.ಡಿ-8620ನೇ ಹೆಚ್.ಎಫ್.ಡಿಲಕ್ಸ್ ಮೋಟಾರ್ ಬೈಕ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಮತ್ತು ಇತರೆ ಬೈಕು ಕಳವು ಪ್ರಕರಣಗಳಲ್ಲಿ ಆರೋಪಿತರನ್ನು ಮತ್ತು ಕಳುವಾದ ಬೈಕಗಳನ್ನು ಪತ್ತೆ ಮಾಡಲು ಈ ಹಿಂದೆ ಇದ್ದ ಎಸ್ಪಿ ಸಿ.ಬಿ ರಿಷ್ಯಂತ್, ಪ್ರಸ್ತುತ ಎಸ್ಪಿ ಡಾ. ಅರುಣ್.ಕೆ ಮತ್ತು ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಡಾ.ಕೆ.ಎಂ.ಸಂತೋಷ್ ನೇತೃತ್ವದಲ್ಲಿ ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹೆಚ್.ಎಂ.ಸಿದ್ದೇಗೌಡ, , ಸಿ.ಪಿ.ಐ. ಆರ್.ಪಿ.ಅನಿಲ್ ಪಿಎಸ್ ಐ ಶ್ರೀಶಿವಕುಮಾರ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು.

ಈ ತಂಡವು ಹೊನ್ನಾಳಿ ಪಟ್ಟಣದ ಟಿ.ಬಿ.ಸರ್ಕಲ್ ಬಳಿ ಇರುವ ತೋಟಗಾರಿಕೆ ಇಲಾಖೆ ಕಛೇರಿ ಮುಂಭಾಗ ಬೈಕ್ ಕಳುವು ಮಾಡಿದ್ದ ಆರೋಪಿತರಾದ 01) ಸಿದ್ದೇಶ,
36 ವರ್ಷ, ಆಟೋ ಡ್ರೈವರ್ ಕೆಲಸ, ನಿಟ್ಟುವಳ್ಳಿ, ದಾವಣಗೆರೆ, 02) ಮಂಜುನಾಥ, 27 ವರ್ಷ, ತರಗಾರ ಕೆಲಸ, ನಿಟ್ಟುವಳ್ಳಿ, ದಾವಣಗೆರೆ ಇವರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿದ್ದು, ಹೆಚ್ಚಿನ ವಿಚಾರಣೆ ಮಾಡಲಾಗಿ ಇವರುಗಳು ಹೊನ್ನಾಳಿ, ದಾವಣಗೆರೆ,
ಹರಪನಹಳ್ಳಿ, ಜಗಳೂರು, ಹಾವೇರಿ, ರಾಣೇಬೆನ್ನೂರು, ಶಿವಮೊಗ್ಗ, ಚನ್ನಗಿರಿ, ಹೊಳಲ್ಕೆರೆ, ಚಿತ್ರದುರ್ಗ, ಹಾಗೂ ವಿವಿಧ ಕಡೆಗಳಲ್ಲಿ ಬೈಕುಗಳನ್ನು ನಕಲಿ ಕೀ ಗಳನ್ನು ಬಳಸಿ ಬೈಕುಗಳನ್ನು ಕಳ್ಳತನ ಮಾಡಿ, 03) ಪ್ರಕಾಶ್, 43 ವರ್ಷ, ಆರ್.ಟಿ.ಓ. ಏಜೆಂಟ್ ಕೆಲಸ,ನಿಟ್ಟುವಳ್ಳಿ, ದಾವಣಗೆರೆ, 04) ಕಲೀಂ @ಕಲಾಮುದ್ದೀನ್, 29 ವರ್ಷ, ಎಸ್.ಎಂ.ಆರ್. ಆಟೋ ಲಿಂಕ್ಸ್ ನಲ್ಲಿ ಕೆಲಸ, ಭಾಷಾನಗರ,ದಾವಣಗೆರೆ, 05) ಮಹಮದ್ ಯಾಸೀರ್ ಅರಾಫತ್, 32 ವರ್ಷ, ಹರ್ಷ ಆಟೋ ಲಿಂಕ್ಸ್, ಎಸ್.ಪಿ.ಎಸ್. ನಗರ, ದಾವಣಗೆರೆ ಇವರುಗಳಿಗೆ ಕಳ್ಳತನ ಬೈಕುಗಳನ್ನು ಮಾರಾಟ ಮಾಡಿದ್ದು, ಇವರುಗಳು ದಾವಣಗೆರೆ ಆರ್.ಟಿ.ಓ.ಕಛೇರಿಯಲ್ಲಿ ಪ್ರಕಾಶನು ಕಲೀಂ ಮತ್ತು ಮಹಮದ್ ಯಾಸೀರ್ ಅರಾಫತ್ ಅವರಿಗೆ ಪರಿಚಯವಿರುವ ಆರ್.ಟಿ.ಓ. ಏಜೆಂಟ್ ಗಳ ಮೂಲಕ ಆರ್.ಟಿ.ಓ.ಕಛೇರಿಯಲ್ಲಿನ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಕಳ್ಳತನ ಮಾಡಿದ ಬೈಕುಗಳ ಆರ್.ಸಿ.ಗಳನ್ನು ಬೇರೆಯವರಿಗೆ ಬದಲಾವಣೆ ಮಾಡಿ ಮಾರಾಟ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿರುತ್ತದೆ.

ಆರೋಪಿತರುಗಳಿಂದ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ 04 ಪ್ರಕರಣಗಳು, ದಾವಣಗೆರೆಯ ಕೆ.ಟಿ.ಜೆ.ನಗರ ಪೊಲೀಸ್ ಠಾಣೆಯಲ್ಲಿ 03 ಪ್ರಕರಣಗಳು, ಬಸವನಗರ
ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ 02 ಪ್ರಕರಣಗಳು, ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ 03 ಪ್ರಕರಣ, ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ 02 ಪ್ರಕರಣಗಳು, ರಾಣೇಬೆನ್ನೂರು ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಶಿವಮೊಗ್ಗ ಜಿಲ್ಲೆಯ ಜಯನಗರ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಶಿವಮೊಗ್ಗ
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಜಗಳೂರು ಪೊಲೀಸ್ ಠಾಣೆಯಲ್ಲಿ 03 ಪ್ರಕರಣಗಳು, ಹಾವೇರಿ ಟೌನ್ ಪೊಲೀಸ್ ಠಾಣೆಯಲ್ಲಿ 02 ಪ್ರಕರಣಗಳು ಒಟ್ಟು 26 ಬೈಕ್ ಕಳ್ಳತನ ಪ್ರಕರಣಗಳಲ್ಲಿ ಸುಮಾರು 13,00,000/-ರೂ ಬೆಲೆ ಬಾಳುವ 26 ಬೈಕುಗಳನ್ನು ಅಮಾನತ್ತು ಪಡಿಸಿಕೊಂಡಿದ್ದು, ಮೇಲ್ಕಂಡ ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *