ದಾವಣಗೆರೆ; ಜಿಲ್ಲೆಯ ಜಗಳೂರು ಕೆಇಬಿ ವೃತ್ತ ಬಳಿ ಏ.26. ರಂದು ಬೆಳಗಿನ ಜಾವ 4.30ರ ಸಮಯದಲ್ಲಿ ಕಾರಿನಲ್ಲಿ ಹೋಗುತ್ತಿದ್ದವರ ಮೇಲೆ 20 ರಿಂದ 30 ಜನರ ಗುಂಪು ದಾಳಿ ಮಾಡಿದೆ. ಕೈಯಲ್ಲಿದ್ದ ಕಟ್ಟಿಗೆಯಿಂದ ಕಾರಿನ ಗಾಜುಗಳನ್ನು ಹೊಡೆದು ಜಖಂಗೊಳಿಸಿದ್ದಾರೆ. ಇದಲ್ಲದೆ ಪ್ರಯಾಣಿಕರಿಂದ ಹಣ ಸುಲಿಗೆ ಮಾಡಿದ್ದಾರೆ.
ದಾವಣಗೆರೆ ಸಿದ್ದರಾಮೇಶ್ವರ ಬಡಾವಣೆಯ ಮೋನಿಕಾ ಕುಟುಂಬ ಹಾಗೂ ಜಗಳೂರಿನ ಬಾಲಾಜಿ ಎಲೆಕ್ಟ್ರಿಕ್ ನ ಮದನಲಾಲ್ ಮತ್ತು ರಾಮಲಿಂಗೇಶ್ವರ ಸ್ವಾಮೀಜಿ ಕಾರುಗಳನ್ನು ತಡೆದು ಕಟ್ಟಿಗೆಗಳಿಂದ ಹೊಡೆದು ಜಖಂಗೊಳಿಸಿ ಆ ಎರಡು ಕಾರಿನಲ್ಲಿದ್ದವರ ಬಳಿ ಹೆದರಿಸಿ ಬಲವಂತವಾಗಿ ಹಣವನ್ನು ಕಿತ್ತುಕೊಂಡು ಹೋಗಿರುತ್ತಾರೆ. ಎಂದು ನೀಡಿದ ದೂರಿನ ಮೇರೆಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.



