ದಾವಣಗೆರೆ: ವಾಕ್ ಹೋದ ಮಹಿಳೆಯರು, ವೃದ್ಧೆಯರ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಾರ್ವಜನಿಕರೇ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆರೋಪಿಗಳಿಂದ 7 ಗ್ರಾಂ ಬಂಗಾರದ ಸರ ಕೃತ್ಯಕ್ಕೆ ಬಳಸಿದ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಿರಿಜಮ್ಮ ತರಳಬಾಳು ಬಡಾವಣೆಯ ಮಕ್ಕಳ ಉದ್ಯಾನವನದ ಪಾರ್ಕ್ ನಲ್ಲಿ ಮೊಮ್ಮಗನ ಜೊತೆ ಮನೆಯ ಕಡೆಗೆ ಬರುತ್ತಿದ್ದು, ಆ ಸಮಯದಲ್ಲಿ ತಮ್ಮ ಹಿಂಬದಿಯಂದ ಬಂದ ವ್ಯಕ್ತಿಗಳು ಗಿರಿಜಮ್ಮ ಕುತ್ತಿಗೆಯ ಹಿಂಭಾಗಕ್ಕೆ ಜೋರಾಗಿ ಗುದ್ದಿ ಅವರ ಕೊರಳಲಿದ್ದ ಬಂಗಾರದ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. 10 ಗ್ರಾಂ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿದ್ದರು. ಆರೋಪಿಗಳು ಗುದ್ದಿದ ರಭಸಕ್ಕೆ ಗಿರಿಜಮ್ಮ ಇವರು ನೆಲಕ್ಕೆ ಬಿದ್ದಿದ್ದು ಬಲಕಾಲಿನ ಮಂಡಿಯ ಬಳಿ ಗಾಯವಾಗಿತ್ತು.
ಗಿರಿಜಮ್ಮ ಜೋರಾಗಿ ಕೂಗಿಕೊಂಡಿದ್ದರಿಂದ ಅಲ್ಲಿದ್ದ ಸಾರ್ವಜನಿಕರುಗಳು, ಆರೋಪಿತರುಗಳನ್ನು ಕಾರ್‌ನಲ್ಲಿ ಬೆನ್ನಟ್ಟಿ ಹಿಡಿದುಕೊಂಡು ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದರು.