ದಾವಣಗೆರೆ; ಅಕ್ರಮ ಗಾಂಜಾ ಮಾರಾಟ ಮತ್ತು ಮಹಿಳೆಯರ ಭಾವಚಿತ್ರಗಳನ್ನು ತಿರುಚಿ ಯುಟೂಬ್ ಚಾನಲ್ ನಲ್ಲಿ ಹಾಕಿ ಮಹಿಳೆಯರ ವೈಯಕ್ತಿಕ ಹಾನಿ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ತಾಲ್ಲೂಕ್ ಯರಗುಂಟೆ ಗ್ರಾಮದ ಹತ್ತಿರ ಯಾರೋ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆ ಎಂದ ಮಾಹಿತಿ ಮೇರೆಗೆ ಡಿವೈಎಸ್ಪಿ ರೋಷನ್ ಜಮೀರ್ , ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್, ಸಿಇಎನ್ ಪೊಲೀಸ್ ಠಾಣೆ ಮಂಜುನಾಥ್ ಬಿ ಹಾಗೂ ಸಿಬ್ಬಂದಿಗಳ ತಂಡ ದಾಳಿ ಮಾಡಿದೆ.
ದಾಳಿಯಲ್ಲಿ 1) ಸುರೇಶ ಲಂಬಾಣಿ ವಾಸ:
ಗೊರವನಗುಡ್ಡ ತಾಂಡ ಹೂವಿನ ಹಡಗಲಿ ತಾಲ್ಲೂಕ್ ವಿಜಯನಗರ ಜಿಲ್ಲೆ , 2) ಜಯಕುಮಾರ್ ಪಿ ವಾಸ: ದೊಂಬರಹಳ್ಳಿ ತಾಂಡ ಹೂವಿನ ಹಡಗಲಿ ತಾಲ್ಲೂಕ್ ವಿಜಯನಗರ ಜಿಲ್ಲೆ, ಇವರನ್ನು ವಶಕ್ಕೆ ಪಡರಯಲಾಗಿದೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ತಂದಿದ್ದ 280 ಗ್ರಾಂ ಒಣಗಿದ ಗಾಂಜಾ (ಅಂದಾಜು ಬೆಲೆ 5,500/- ರೂಗಳು) ವಶಕ್ಕೆ ಪಡೆದು ದಾವಣಗರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಇಬ್ಬರು ಆರೋಪಿಗಳನ್ನು ವಿಚಾರಣೆ ಮಾಡಿ ಅವರ ಮೊಬೈಲ್ ಗಳನ್ನು ಜಪ್ತು ಮಾಡಿಕೊಂಡು ಪರಿಶೀಲನೆ ನಡೆಸಿದಾಗ ಇವರಿಬ್ಬರು You Tube ನಲ್ಲಿ Second Marriage Matrimony Kannada ಎಂಬ ಚಾನಲ್‌ನಲ್ಲಿ ಹೆಚ್ಚಿನ ನೋಡುಗರನ್ನು (Viewers ) ಗಳಿಸಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೆಲವು ಮಹಿಳೆಯರ ಭಾವಚಿತ್ರಗಳನ್ನು ತಿರುಚಿ ಅವರ ವೈಯಕ್ತಿಕ ಖ್ಯಾತಿಗೆ ಹಾನಿ ಮಾಡುವ ಉದ್ದೇಶ ಹೊಂದಿದ್ದರು ಎಂಬ ಅಂಶ ತಿಳಿದು ಬಂದಿದ್ದು, ಈ ಬಗ್ಗೆಯೂ ಕೂಡ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿ.ಇ.ಎನ್ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಗೋವಿಂದರಾಜ್, ಲೋಹಿತ್, ಕೊಟ್ರೇಶ್, ಉಮೇಶ್, ಲಿಂಗರಾಜು ಮತ್ತು ಇತರೆ ಸಿಬ್ಬಂದಿಯವರು ಭಾಗವಹಿಸಿದ್ದರು. ಈ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.



