ದಾವಣಗೆರೆ; ವಿನೋಬ ನಗರದಲ್ಲಿ ಕಾನೂನು ಬಾಹಿರವಾಗಿ ಕೇರಂ ಜೂಜಾಟ ಆಡುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ಮಾಡಿದ್ದು, 20 ಆರೋಪಿಗಳ ಬಂಧನ ಮಾಡಿ 1.60 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ ನಗರದ ವಿನೋಭ ನಗರ 2ನೇ ಮೇನ್, 14ನೇ ಕ್ರಾಸ್ ನಲ್ಲಿ ಮೊದಲನೇ ಮಹಡಿನಲ್ಲಿರುವ ಕೋಣೆಯಲ್ಲಿ ಗಿರೀಶ ವೈಎಂ ಮತ್ತು ಇತರರು ಸೇರಿಕೊಂಡು ಕೇರಂ ಕ್ಲಬ್ ನಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಕಟ್ಟಿಕೊಂಡು ಕೇರಂಜೂಜಾಟವಾಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಡಿವೈಎಸ್ ಪಿ ಮಲ್ಲೇಶ್ ದೊಡ್ಡನಿಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಧನಂಜಯ್, ಪಿಎಸ್ ಐ ದೀಪು ಎಂ.ಟಿ, ಸಿಬ್ಬಂದಿಗಳಾದ ಸಂತೋಷ, ಕೆಂಚಪ್ಪ ದಾಳಿ ಮಾಡಿದ್ದು ಸ್ಥಳದಲ್ಲಿ ಗಿರೀಶ್ ವೈಎಂ ಮತ್ತು ಇತರೆ 19 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿತರಿಂದ 1,60,000/- ರೂ ನಗದು ಹಣ, 4 ಕೇರಂ ಬೋರ್ಡ್ ಗಳು ಮತ್ತು ಆಟದ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಕಾರ್ಯಾಚರಣೆ ಯಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್ಪಿ ಸಿ.ಬಿ.ರಿಷ್ಯಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.



