ದಾವಣಗೆರೆ: ಕರ್ನಾಟಕ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ದಾಖಲೆ ಇಲ್ಲದೆ ಸಾಗಿಸುತಗತಿದ್ದ 39 ಲಕ್ಷಮೌಲ್ಯದ 66 ಕೆಜಿ ಬೆಳ್ಳ ಸಾಮಾನು ಜಪ್ತಿ ಮಾಡಲಾಗಿದೆ.
ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಹೆಬ್ಬಾಳ ಟೋಲ್ ಬಳಿ ದಾಖಲೆಯಿಲ್ಲದೆ ಐಷಾರಾಮಿ ಕಾರೊಂದರಲ್ಲಿ ಸಾಗಿಸಲಾಗುತ್ತಿದ್ದ ರೂ. 39 ಲಕ್ಷ ಮೌಲ್ಯದ 66ಕೆಜಿ ಬೆಳ್ಳಿಯ ಸಾಮಾನುಗಳನ್ನು ಜಪ್ತು ಮಾಡಲಾಗಿದೆ. ಕಾರು ಮಹಾರಾಷ್ಟ್ರ ರಾಜ್ಯದಲ್ಲಿ ನೋಂದಣಿಯಾಗಿದೆ. ಮೂಲಗಳ ಪ್ರಕಾರ ಚುನಾವಣಾಧಿಕಾರಿ ಅಶ್ವಥ್ ಕಾರಿನ ತಪಾಸಣೆ ನಡೆಸಿ ಬೆಳ್ಳಿವಸ್ತುಗಳ ಜೊತೆ ಕಾರನ್ನೂ ಸೀಜ್ ಮಾಡಿದ್ದಾರೆ.