ದಾವಣಗೆರೆ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ 32,32,008 ರೂ.ಹಳನ್ನು ಚುನಾವಣಾಧಿಕಾರಿಗಳು ನಗರದ ಹೊರವಲಯದ ಬೇತೂರು ರಸ್ತೆಯ ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್‌ಎಸ್‌ಟಿ ಪ್ರವೀಣ್‌ಕುಮಾರ್ ಅವರ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುವಾಗ ಹಣ ಪತ್ತೆಯಾಗಿದೆ. ಇದು ದಾವಣಗೆರೆ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಪ್ರದೇಶವಾಗಿದೆ. ಪತ್ತೆಯಾದ ಹಣ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರಿಗೆ ಸೇರಿದ್ದಾಗಿದೆ. ಸ್ವಸಹಾಯ ಸಂಘಗಳಿಂದ ವಸೂಲು ಮಾಡಿರುವ ಹಣ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, 10 ಲಕ್ಷಕ್ಕೂ ಹೆಚ್ಚು ಹಣ ಸಾಗಾಟ ಹಿನ್ನೆಲೆ ಆದಾಯ ತೆರಿಗೆ ಇಲಾಖೆಯವರಿಗೆ ಒಪ್ಪಿಸಲಾಗಿದೆ.



