ದಾವಣಗೆರೆ: ಕಪ್ಪು ಬೈಕ್‌ನಲ್ಲಿ ಬಂದ ಇಬ್ಬರು ನಗರದ ತರಳಬಾಳು ಬಡಾವಣೆಯಲ್ಲಿ ರಾತ್ರಿ ಊಟ ಮುಗಿಸಿ ವಾಕ್ ಮಾಡುತ್ತಿದ್ದ ವೃದ್ಧೆ ಕುತ್ತಿಗೆಯಲ್ಲಿದ್ದ 2 ಲಕ್ಷ ಮೌಲ್ಯದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.
ವೃದ್ಧೆ ಶೋಭಾ (60) ಅವರ ಸರ ಕಳವಾಗಿದ್ದು, ರಾತ್ರಿ 10 ಗಂಟೆ ತರಳಬಾಳು ಬಡಾವಣೆಯ ಮೂರನೇ ಮೇನ್ ರಸ್ತೆಯಲ್ಲಿ ಪತಿಯ ಜೊತೆ ನಡೆದುಕೊಂಡು ಹೋಗುತ್ತಿರುವ ಕಪ್ಪು ಬೈಕ್‌ನಲ್ಲಿ ಬಂದ ಇಬ್ಬರು ಮುಂದೆ ಹೋಗಿ, ಬೈಕ್ ತಿರುಗಿಸಿಕೊಂಡು ಬಂದು ವೃದ್ಧೆಯ ಕುತ್ತಿಗೆಗೆ ಕೈ ಹಾಕಿದ್ದಾರೆ. ಆಗ ಶೋಭಾ ಅವರು ಸರವನ್ನು ಬಲವಾಗಿ ಹಿಡಿದುಕೊಂಡಿದ್ದಾರೆ. ಅರ್ಧ ಉಳಿದಿದ್ದು, ಉಳಿದ ಅರ್ಧವನ್ನು ಕಳ್ಳರು ಕಸಿದುಕೊಂಡು ಹೋಗಿದ್ದಾರೆ.



