ದಾವಣಗೆರೆ: ವಿವಿಧ ಕಡೆ ಮನೆ ಕಳ್ಳತನ ಮಾಡುತ್ತಿದ್ದ ನಾಲ್ವರು ಅಂತರ್ ಜಿಲ್ಲಾ ಆರೋಪಿಗಳನ್ನು ಬಂಧಿಸಿದ್ದು, 11.17 ಲಕ್ಷ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ ಎರಡು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರೀವಾಲ್ ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆಯ ಪೊಲೀಸ್ ನಿರೀಕ್ಷಕ ದೇವಾನಂದ ಎಸ್ ಹಾಗೂ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ ತಂಡವು ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಹರ ನಗರದ ಜೆ.ಸಿ.ಬಡಾವಣೆ, ಲೋಹರ್ ಮೊಹಲ್ಲಾ, ದೊಡ್ಡ ಬೀದಿಯಲ್ಲಿ ಹಾಗೂ ರಾಣೆಬೆನ್ನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೌಳಿಗಲ್ಲಿ ಗೂಡ್ ಶೆಡ್ ರಸ್ತೆಯಲ್ಲಿ ಮನೆಕಳ್ಳತನ ಮಾಡಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದೆ.
ರಾಣೆಬೆನ್ನೂರು ನಗರ ಠಾಣೆಯ 01 ಪ್ರಕರಣ ಹಾಗೂ ಹರಿಹರ ನಗರ ಠಾಣೆಯ 03 ಪ್ರಕರಣಗಳಲ್ಲಿ ಕೃತ್ಯಕ್ಕೆ ಬಳಕೆ ಮಾಡಿದ 1] ಎರಡು ಬೈಕ್‌ಗಳು (ಅಂದಾಜು ಬೆಲೆ
35,000/-ರೂಗಳು), 269.5 ಗ್ರಾಂ ಬಂಗಾರದ ಆಭರಣಗಳು (ಅಂದಾಜು ಬೆಲೆ 10,82,500/-ರೂಗಳು) ಒಟ್ಟು 11,17,500 [ಹನ್ನೊಂದು ಲಕ್ಷದ ಹದಿನೇಳು ಸಾವಿರದ ಐದನೂರು ರೂಪಾಯಿಗಳು] ರೂ ಬೆಲೆಯ ಬೈಕ್
ಮತ್ತು ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮನೆ ಕಳ್ಳತನ ಮಾಡಿದ ಆರೋಪಿತರನ್ನು ಪತ್ತೆ ಹಾಗೂ ಸ್ವತ್ತು ವಶಪಡಿಸಿಕೊಳ್ಳುಲ್ಲಿ ಮೇಲ್ಕಂಡ ಅಧಿಕಾರಿಗಳು
ಸೇರಿದಂತೆ ಪಿಎಸ್ ಐ ಶಂಕರಗೌಡ ಪಾಟೀಲ್, ಚಿದಾನಂದಪ್ಪ.ಎಸ್.ಬಿ, ಮಂಜುನಾಥ ಕಲ್ಲೇದೆವರು
ಹಾಗೂ ಸಿಬ್ಬಂದಿ ಮಂಜುನಾಥ ಕ್ಯಾತಮ್ಮನವರ, ರಿಜ್ವಾನ್ ನಾಸೂರ್, ಮಂಜುನಾಥ, ದಿಲೀಪ್, ದೇವರಾಜ್
ಸೂರ್ವೆ, ನಾಗರಾಜ, ಹನುಮಂತ ಗೋಪನಾಳ, ಸಿದ್ದರಾಜು, ಮಂಜುನಾಥ, ಬೀರಲಿಂಗೇಶ ಗುಡಿಯವರ, ಕಾಂತರಾಜ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿ ರಾಘವೇಂದ್ರ, ಶಾಂತರಾಜ್, ನಾಗರಾಜ ಕುಂಬಾರ, ಅಖರ್, ವಿರೇಶ, ಅಡಿವೆಪ್ಪನವರ್ ಮಾರುತಿ ಇವರುಗಳನ್ನೊಳಗೊಂಡ ತಂಡವು ಮನೆ ಕಳ್ಳತನದ ಪ್ರಕರಣಗಳಲ್ಲಿನ ಆರೋಪಿತರನ್ನು ಪತ್ತೆ ಮಾಡಿ ಮಾಲನ್ನು
ಅಮಾನತ್ತು ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಗೆ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್
ಐ.ಪಿ.ಎಸ್ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶರಾಮಗೊಂಡ ಬಿ ಬಸರಗಿ ಪ್ರಶಂಸಿದ್ದಾರೆ.