ದಾವಣಗೆರೆ: ನಗರದ ಅಶೋಕ ಥಿಯೇಟರ್ ಬಳಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯುವಕನೊಬ್ಬ ಯತ್ನಿಸಿದ್ದಾನೆ. ಅಲ್ಲೇ ಇದ್ದ ಸಾರ್ವರ್ಜನಿಕರು ಕ್ಷಣಾರ್ಧದಲ್ಲಿ ಅರ್ಲರ್ಟ್ ಆಗಿ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ದಾವಣಗೆರೆ ರೈಲ್ವೆ ನಿಲ್ದಾಣದಿಂದ ಹೊರಟ ರೈಲು ಅಶೋಕ ಥಿಯೇಟರ್ ಬಳಿ ಬರುತ್ತಿದ್ದಂತೆ ಅಲ್ಲೇ ನಿಂತಿದ್ದ ಯುವಕ ಹಳಿಗೆ ತಲೆ ಕೊಡಲು ಮುಂದಾಗಿದ್ದಾನೆ. ಅಲ್ಲೇ ಗೇಟ್ ಬಳಿ ನಿಂತಿದ್ದ ಸಾರ್ವಜನಿಕರು ಕೂಗುತ್ತ ಬಂದು ಯುವಕನನ್ನು ಎಳೆದು ಹಾಕಿ, ರಕ್ಷಣೆ ಮಾಡಿದ್ದಾರೆ.