ದಾವಣಗೆರೆ: SBI ಆನ್ ಲೈನ್ ಬ್ಯಾಂಕಿಂಗ್ ಯೋನೊ ಆ್ಯಪ್ ಅಪ್ಡೇಟ್ ಮಾಡಲು ಹೋಗಿ ವ್ಯಕ್ತಿಯೊಬ್ಬರು 4.15 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ.
ನಗರದ ದೇವರಾಜ ಅರಸು ಬಡಾವಣೆ ನಿವಾಸಿ ವಿರೂಪಾಕ್ಷಪ್ಪ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಪಿಜೆ ಬಡಾವಣೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ವಿರೂಪಾಕ್ಷಪ್ಪ ಉಳಿತಾಯ ಖಾತೆ ಹೊಂದಿದ್ದು, ಅವರಿಗೆ ಎಸ್‌ಬಿಐ ಯೋನೊ ಆ್ಯಪ್ ಪ್ಯಾನ್ ಅಪ್ಡೇಟ್ ಮಾಡಿಕೊಳ್ಳುವಂತೆ ಎಸ್ ಎಂಎಸ್ ಲಿಂಕ್ ಬಂದಿದೆ. ಈ ಲಿಂಕ್ ಒತ್ತಿದಾಗ ಹಣ ಕಳೆದುಕೊಂಡಿದ್ದಾರೆ.
ಮರುದಿನ ಅವರ ಖಾತೆಯಿಂದ ಹಣ ಕಡಿತಗೊಂಡ ಬಗ್ಗೆ ಅವರ ಮೊಬೈಲ್‌ಗೆ ಸಂದೇಶ ಬಂದಿದೆ. ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಅವರ ಖಾತೆಯಿಂದ ಕ್ರಮವಾಗಿ ವಿವಿಧ ಹಂತಗಳಲ್ಲಿ 4.15 ಲಕ್ಷ ಕಡಿತಗೊಂಡಿದೆ. ಹೀಗಾಗಿ ಆನ್ ಲೈನ್ ವಂಚನೆ ಎಚ್ಚರ ವಹಿಸಬೇಕಿದೆ. ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.