ದಾವಣಗೆರೆ: ದರೋಡೆಕೋರರ ಬಂಧನ; ಆರೋಪಿಗಳಿಂದ 1.48 ಲಕ್ಷ ನಗದು ಸಹಿತ 9.66 ಲಕ್ಷ ಮೌಲ್ಯದ ಸ್ವತ್ತು ವಶ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಜಿಲ್ಲೆಯ ನ್ಯಾಮತಿ ಠಾಣೆ ವ್ಯಾಪ್ತಿಯಲ್ಲಿ ದರೋಡೆಕೋರರನ್ನು ಬಂಧಿಸಿದ್ದು, ಬಂಧಿತ ಆರೋಪಿಗಳಿಂದ 1,48,000/- ರೂ. ನಗದು ಸಹಿತ ಒಟ್ಟು ಮೌಲ್ಯ ಸುಮಾರು 9,66,000/- ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಹೊನ್ನಾಳಿ ಠಾಣೆಯ ಡಿ.17ರಂದು ನಿರೀಕ್ಷಕ ಸಿದ್ದೇಗೌಡ ಹೆಚ್.ಎಂ ಹಾಗು ನ್ಯಾಮತಿ ಠಾಣೆಯ ಪಿಎಸ್‌ಐ ಮತ್ತು ನ್ಯಾಮತಿ ಪೊಲೀಸ್ ಠಾಣೆಯ ಸಿಬ್ಬಂದಿಯವರು ಅಪರಾಧ ತಡೆ ಮಾಸಚರಣೆಯ ಪ್ರಯುಕ್ತ ಸವಳಂಗ ಸರ್ಕಲ್ ಬಳಿ ರಸ್ತೆಯಲ್ಲಿ ಹೋಗಿಬರುವ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಬೆಳಗ್ಗೆ ಸಮಯದಲ್ಲಿ ಶಿಕಾರಿಪುರ ಕಡೆಯಿಂದ ಒಂದು ಬುಲೆರೊ ಪಿಕ್‌ ಅಪ್ ಗೂಡ್ಸ್ ವಾಹನದಲ್ಲಿ ಐದು ಜನ ಅಸಾಮಿಗಳು ಕುಳಿತುಕೊಂಡು ಬರುತ್ತಿದ್ದವರು ನಮ್ಮನ್ನು ನೋಡಿ ಒಮ್ಮೆಲೆ ತಮ್ಮ ವಾಹನವನ್ನು ತಿರುಗಿಸಿಕೊಂಡು ವಾಪಸ್ಸು ಹೋಗಲು ಪ್ರಯತ್ನಿಸಿದವರನ್ನು ಸಿದ್ದೇಗೌಡ ಹೆಚ್.ಎಂ ಹಾಗೂ ಸಿಬ್ಬಂದಿ ಸುತ್ತುವರೆದು ವಾಹನವನ್ನು ತಡೆದು ಅದರಲ್ಲಿದ್ದ ಅಸಾಮಿಗಳನ್ನು ಹಿಡಿದುಕೊಂಡಿದ್ದಾರೆ.

ನಂತರ ವಾಹನವನ್ನು ಪರಿಶೀಲಿಸಿ ನೋಡಲಾಗಿ ಕೆಎ-68/2405 ನೊಂದಣಿ ಸಂಖ್ಯೆಯ ವಾಹನವಾಗಿದ್ದು, ಈ ವಾಹನವು ನ್ಯಾಮತಿ ಪೊಲೀಸ್‌ ಠಾಣೆಯಲ್ಲಿ ಈ ಹಿಂದೆ ದಾಖಲಾಗಿದ್ದ ಪ್ರಕರಣದಲ್ಲಿ ದರೋಡೆ ಮಾಡಿಕೊಂಡು ಹೋಗಿರುವ ವಾಹನವಾಗಿದ್ದಿತು. ಆರೋಪಿಗಲಾದ 1)ಶಕೀಲ್ ಅಹಮ್ಮದ್, 27 ವರ್ಷ, ಡ್ರೈವರ್/ಕೂಲಿಕೆಲಸ, ವಾಸ ಹಳೇಮಸಿದಿ ಕೇರಿ, ಆಶಯ ಬಡಾವಣೆ, ಶಿಕಾರಿಪುರ ಟೌನ್, 2) ಫೈರೋಜ್, 20 ವರ್ಷ, ಗಾರೆಕೆಲಸ, ಡ್ರೈವರ್ ಕೆಲಸ, ವಾಸ, ಚನ್ನಕೇಶ್ವರ ನಗರ, 7ನೇ ಕ್ರಾಸ್, ಶಿಕಾರಿಪುರ ಟೌನ್, 3) ಇಮಾನ್ ಷರೀಪ್ @ ಕೀಲಿ ಇಮಾನ್ , 35 ವರ್ಷ, ಡ್ರೈವರ್ ಕೆಲಸ, ವಾಸ 1ನೇ ಕ್ರಾಸ್, ಟಿಪ್ಪುನಗರ, ಶಿವಮೊಗ್ಗ ಟೌನ್, ಹಾಲಿವಾಸ ಆಶಯ ಬಡಾವಣೆ, ಶಿಕಾರಿಪುರ ಟೌನ್, 4) ಸೈಯದ್ ಸಾಧೀಕ್, 23 ವರ್ಷ, ಗಾರೆ ಕೆಲಸ, ವಾಸ 12ನೇ ಕ್ರಾಸ್, ಆಶ್ರಯ ಬಡಾವಣೆ, ಶಿಕಾರಿಪುರ ಟೌನ್, 5) ವಾಸೀಂ, 19 ವರ್ಷ, ಗಾರೆಕೆಲಸ, ವಾಸ ಆಶ್ರಯ ಬಡಾವಣೆ, ಶಿಕಾರಿಪುರ ಟೌನ್ ನಿವಾಸಿಗಳು ಎಂದು ತಿಳಿದು ಬಂದಿದೆ.

ಡಿವೈಎಸ್ ಪಿ ಡಾ.ಸಂತೋಷ್ ಕೆ.ಎಂ ಮಾರ್ಗದರ್ಶನದಲ್ಲಿ ಕೆಎ-68 2405 ಮಹೀಂದ್ರಾ ಬುಲೆರೋ ಪಿಕಪ್ ವಾಹನ, ಅದರ ಅಂದಾಜು ಬೆಲೆ 7,38,000/- ರೂಗಳಷ್ಟು ಆಗಿರುತ್ತದೆ. 2] ಕೆಎ-15 ಇಎಫ್-6686 ನೇ ಹೊಂಡ ಕಂಪನಿಯ `ಡಿಯೋ ಸ್ಕೂಟಿ ವಾಹನ ಅದರ ಅಂದಾಜು ಬೆಲೆ 40,000/- ರೂ ಮತ್ತು 3] ಕೆಎ-I5 ಇಎಫ್-1393 ನೇ ಸುಜುಕಿ ಕಂಪನಿಯ ಆಕ್ಸ್‌ಸ್ ಸ್ಕೂಟಿ ವಾಹನ ಅದರ ಅಂದಾಜು ಬೆಲೆ 40,000/- ರೂ ಆಗಿದ್ದು ಹಾಗೂ 1,48,000/- ರೂ ಹಣ ಆರೋಪಿತರುಗಳಿಂದ ವಶಕ್ಕೆ ಪಡೆದಿದ್ದು ಒಟ್ಟು ಮೌಲ್ಯ ಸುಮಾರು 9,66,000/- ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಸಿದ್ದೇಗೌಡ ಹೆಚ್‌.ಎಂ, ಹೊನ್ನಾಳಿ ಠಾಣೆ, ನ್ಯಾಮತಿ ಠಾಣೆಯ ಪಿಎಸ್‌ಐ ರಮೇಶ್ ಪಿ.ಎಸ್. ಸಿಬ್ಬಂದಿಯವರಾದ ರವಿನಾಯಕ, ಉಮೇಶ, ಮಂಜಪ್ಪ, ಲಕ್ಷಣ್, ದೇವರಾಜ್. ಮಹೇಶನಾಯ್ಕ, ತಿಮ್ಮರಾಜು,ಕೆ.ಆರ್. ಜಗದೀಶ ಚಂದ್ರಶೇಖರ್, ಮಂಜಪ್ಪ ಭಾಗವಹಿಸಿದ್ದು, ಈ ಕಾರ್ಯಾಚರಣೆಯನ್ನು ಎಸ್ ಪಿ ಸಿ.ಬಿ ರಿಷ್ಯಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಶ್ಲಾಘಿಸಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *