ದಾವಣಗೆರೆ: ಸಾಲಬಾಧೆ ತಾಳಲಾಗದೇ ಜಮೀನಲ್ಲಿಯೇ ರೈತ ನೇಣಿಗೆ ಶರಣಾದ ಘಟನೆ ನಡೆದಿದೆ. ಜಿಲ್ಲೆಯ ಜಗಳೂರು ತಾಲೂಕಿನ ಅಸಗೋಡ ಬಳಿಯ ವಡ್ಡರಹಳ್ಳಿ ಗ್ರಾಮದಲ್ಲಿ ತಿಮ್ಮಣ್ಣ (55) ಎಂಬ ರೈತ ಸಾಲ ಸಾಲಬಾಧೆಯಿಂದ ನೇಣಿಗೆ ಶರಣಾಗಿದ್ದಾನೆ.
ನಾಲ್ಕು ಜನ ಹೆಣ್ಣು ಮಕ್ಕಳು, ಮೂರು ಎಕರೆ ಜಮೀನು ಹೊಂದಿದ್ದ ತಿಮ್ಮಣ್ಣ, ಮಗಳ ಮದ್ವೆಗೆ ಐದು ಲಕ್ಷ ರೂಪಾಯಿ ಸಾಲ ಮಾಡಿದ್ದ. ಸಾಲಗಾರರ ಕಾಟ, ಜಮೀನಿನಲ್ಲಿದ್ದ ಬೆಳೆ ಅತಿಯಾದ ಮಳೆಯಿಂದಾಗಿ ಹಾನಿಗೊಳಗಾಗಿದೆ. ಇದರಿಂದವ ಬೇಸತ್ತು ಗ್ರಾಮದ ಹೊರವಲಯದ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಬಿಳಿಚೋಡು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.



