ದಾವಣಗೆರೆ: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಪೊಲೀಸರು ಪತ್ತೆ ಮಾಡಿದ್ದಾರೆ. ಆರೋಪಿಯಿಂದ 1.50 ಲಕ್ಷ ಮೌಲ್ಯದ ಮೂರು ಬೈಕ್ ವಶಕ್ಕೆ ಪಡೆಯಲಾಗಿದೆ.
ಡಿ.12 ರಂದು ಮಂಜುನಾಥ್ ಎಂಬುವವರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ, ತಮ್ಮ ಆಕ್ಟೀವ್ ಹೊಂಡಾ ಬೈಕ್ ಕಳ್ಳತನವಾಗಿದೆ ಎಂದು ಪ್ರಕರಣ ದಾಖಲಿಸಿದ್ದರು. ಡಿವೈಎಸ್ ಪಿ ಕನಿಕಾ ಸಕ್ರಿವಾಲ್ ಮಾರ್ಗದರ್ಶನ ಹಾಗೂ ಲಿಂಗನಗೌಡ ನೇತೃತ್ವದಲ್ಲಿ ಪಿಎಸ್ ಐಗಳಾದ ಮುಂದಿನಮನಿ, ಹಾರೂನ್ ಅಖ್ತರ್ , ಎಎಸ್ ಐ ಗುರುಶಾಂತಯ್ಯ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ತೋಳಹುಣಸೆಯ ರೈಲ್ವೆ ನಿಲ್ದಾಣ ಬಳಿ ವಶಕ್ಕೆ ಪಡೆದಿದ್ದಾರೆ. ಅನುಮಾಸ್ಪದವಾಗಿ ಹೊಂಡಾ ಆಕ್ಟೀವದಲ್ಲಿ ಬಂದ ವ್ಯಕ್ತಿ ಪೊಲೀಸರನ್ನು ನೋಡುತ್ತಿದ್ದಂತೆ ಬೈಕ್ ತಿರುಗಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಆತನನ್ನು ಹಿಡಿದು ವಿಚಾರಣೆ ನೆಡೆಸಿದಾಗ ದಾವಣಗೆರೆ ತಾಲ್ಲೂಕಿನ ಕಾಶಿಪುರದ ಕಾಶಿನಾಥ್ (23) ಎಂದು ಪತ್ತೆಯಾಗಿದೆ.
ಆರೋಪಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಬೈಕ್ ಮತ್ತು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಬೈಕ್ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ಈ ಮೂರು ಬೈಕ್ ಗಳನ್ನು ವಶಕ್ಕೆ ಪಡೆದ್ದು, ಪ್ರಕರಣ ದಾಖಲಾಗಿ 24 ಗಂಟೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.



