ದಾವಣಗೆರೆ: ನಗರದ ಶಾಮನೂರು ರಸ್ತೆಯಲ್ಲಿನ ಬಾಪೂಜಿ ಕಲ್ಯಾಣ ಮಂಟಪದಲ್ಲಿ 1.85 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಡಿ.14 ರಂದು ಸುಜಾತ ಎಂಬುವವರು ಕಲ್ಯಾಣ ಪಂಟಪದಲ್ಲಿ ಅಕ್ಕನ ಮಗನ ಮದುವೆಗೆ ಬಂದಿದ್ದರು. ಅವರು ತಂಗಿದ್ದ ರೂಮ್ ನ ಬ್ಯಾಗ್ ನಲ್ಲಿ 1.85 ಲಕ್ಷ ಮೌಲ್ಯದ 36 ಗ್ರಾಂ ಒಡವೆ ಇಟ್ಟು ಮದುವೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿಸಿ ಬರುವಷ್ಟರಲ್ಲಿ ರೂಮ್ ನ ಬ್ಯಾಗನಲ್ಲಿದ್ದ ಚಿನ್ನಾಭರಣ ಕಳ್ಳತನ ಆಗಿದ್ದವು. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಡಿವೈಎಸ್ ಪಿ ನರಸಿಂಹ ವಿ. ತಾಮ್ರಧ್ವಜ, ಕೆಟಿಜೆ ನಗರ ಸಿಪಿಐ ಯು.ಜೆ. ಶ್ರೀಧರ್ ಮಾರ್ಗದರ್ಶನದಲ್ಲಿ ವಿದ್ಯಾನಗರ ತನಿಖಾಧಿಕಾರಿ ಪಿಎಸ್ ಐ ಪ್ರವೀಣ್ ಕುಮಾರ್ ವಾಲೇಕರ್ ಹಾಗೂ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ಬಂಧಿಸಿ, ಪಡೆದು 36 ಗ್ರಾಂ ತೂಕದ 1.85 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.



