ದಾವಣಗೆರೆ: ನಗರದ ಆಜಾದ್ ನಗರ ಠಾಣೆ ವ್ಯಾಪ್ತಿಯಲ್ಲಿ ಮೀಟರ್ ಬಡ್ಡಿ ದಂಧೆಯಲ್ಲು ತೋಡಗಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಚಂದ್ರನಾಯ್ಕ್ ಬಂಧಿತ ಆರೋಪಿಯಾಗಿದ್ದಾನೆ.
ದೂರುದಾರ ಮಹಿಳೆಯ ಪುತ್ರರೊಬ್ಬರು ಚಂದ್ರನಾಯ್ಕ್‌ನಿಂದ 2021ರ ಡಿಸೆಂಬರ್‌ನಲ್ಲಿ 20,000 ಸಾಲ ಪಡೆದಿದ್ದು, ವಾರಕ್ಕೆ 2,000 ಬಡ್ಡಿ ಕೊಡಲು ಒಪ್ಪಂದವಾಗಿತ್ತು. 2021 ಡಿಸೆಂಬರ್ ತಿಂಗಳಿನಿಂದ 2022ರ ನವೆಂಬರ್‌ವರೆಗೆ 94,000 ಬಡ್ಡಿ ಕಟ್ಟಿದ್ದರು. ಈ ಬಗ್ಗೆ ದೂರು ದಾಖಲಿಸಿದ್ದರು. ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ಲೆಕ್ಕದ ಪುಸ್ತಕ, ಎರಡು ಡೈಲಿ ಕಲೆಕ್ಷನ್ ಪುಸ್ತಕಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚಂದ್ರನಾಯ್ಕ್ ಬಡ್ಡಿ ಹಣ ಕೇಳಲು ಹೋದಾಗ ಇಬ್ಬರ ನಡುವೆ ಜಗಳ ನಡೆದಿದೆ. ಆ ವೇಳೆ ಚಂದ್ರನಾಯ್ಕ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಆಜಾದ್ ನಗರ ಠಾಣೆಯಲ್ಲಿ ಮಗಿಳೆ ದೂರು ದಾಖಲಿಸಿದ್ದರು.ಡಿವೈಎಸ್‌ಪಿ ನರಸಿಂಹ ವಿ. ತಾಮ್ರಧ್ವಜ, ಸಿಪಿಐ ಗಜೇಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಅಜಾದ್ ನಗರ ಠಾಣೆಯ ಪಿಎಸ್‌ಐ ತಿಪ್ಪೇಸ್ವಾಮಿ ಅವರು ನ್ಯಾಯಾಲಯದಿಂದ ಮನೆ ಶೋಧನಾ ವಾರೆಂಟ್ ಪಡೆದು ಠಾಣೆಯ ಎಎಸ್‌ಐ ಷಂಶುದ್ದಿನ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು. ಪೊಲೀಸರ ಈ ಕಾರ್ಯಾಚರಣೆಯನ್ನು ಎಸ್‌ಪಿ ಸಿ.ಬಿ.ರಿಷ್ಯಂತ್, ಎಎಸ್‌ಪಿ ರಾಮಗೊಂಡ ಬಿ. ಬಸರಗಿ ಶ್ಲಾಘಿಸಿದ್ದಾರೆ.



