ದಾವಣಗೆರೆ: ಹಡಗಲಿ ಕಾಂಗ್ರೆಸ್ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ ಹಿನ್ನಲೆ ಜಿಲ್ಲಾ ಬಿಜೆಪಿ ಕಾನೂನು ಘಟಕದಿಂದ ಎಸ್ ಪಿ ಅವರಿಗೆ ದೂರು ಸಲ್ಲಿಸಲಾಗಿದೆ.
ಪಿ.ಟಿ.ಪರಮೇಶ್ವರ ನಾಯ್ಕ್ ವಿರುದ್ಧ ಐ.ಪಿ.ಸಿ ಕಲಂ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಟದ ವತಿಯಿಂದ ಎಸ್ ಪಿ ಅವರಿಗೆ ದೂರು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಕೀಲರ ಸಂಘದ ನಿಕಟಪೂರ್ವ ಉಪಾಧ್ಯಕ್ಷ, ಬಿಜೆಪಿ ಕಾನೂನು ಪ್ರಕೋಷ್ಟದ ಸಂಚಾಲಕ ಹೆಚ್.ದಿವಾಕರ್, ರಾಜ್ಯ ಸಮಿತಿ ಸದಸ್ಯ ಎ.ಸಿ.ರಾಘವೇಂದ್ರ, ದಾವಣಗೆರೆ ಉತ್ತರ ಹಾಗೂ ದಕ್ಷಿಣದ ಸಂಚಾಲಕ ಪಿ.ವಿ.ಶಿವಕುಮಾರ್, ಎ.ಎಸ್.ಮಂಜುನಾಥ, ಮಾಯಕೊಂಡ ಸಂಚಾಲಕ ಮಹೇಶ್ ನಾಯ್ಕ್, ಸಹ ಸಂಚಾಲಕ ಸಿದ್ದೇಶ್, ಮಧು, ಶಂಕರ್ ರಾವ್ ಮತ್ತು ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಮಂಜುಳಾ ಮಹೇಶ್ ಹಾಜರಿದ್ದರು.
ಇತ್ತಿಚೆಗೆ ಹಡಗಲಿ ಕಾಂಗ್ರೆಸ್ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ , ಪ್ರಧಾನ ಮಂತ್ರಿ ಗಳನ್ನು ಕುರಿತು ಅಸಂವಿಧಾನಿಕ ಪದ ಬಳಸಿ ತುಚ್ಛ್ಯವಾಗಿ ಮಾತಾನಾಡಿ ನಿಂದಿಸಿರುತ್ತಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದ ಮೂಲಕ ಹರಡಿರುತ್ತದೆ. ಇದರಿಂದ ನಾವು ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದು, ಈ ಹೇಳಿಕೆಯ ವಿಡಿಯೊದಿಂದ ನಮ್ಮ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ಪಿ.ಟಿ.ಪರಮೇಶ್ವರ ನಾಯ್ಕ್ ಈ ಪದ ಬಳಕೆ ಅಸಂವಿಧಾನಿಕವಾಗಿದೆ. ಒಬ್ಬ ದೇಶದ ಅತ್ತ್ಯುನ್ನತ ಹುದ್ದೆಯಾದ ಪ್ರಧಾನ ಮಂತ್ರಿಯ ಸ್ಥಾನಕ್ಕೆ ಮತ್ತು ಭಾರತದ ಸಂವಿಧಾನಕ್ಕೆ ಮಾಡಿದ ಅಪಮಾನವಾಗಿರುತ್ತದೆ. ಅಲ್ಲದೇ ಅ ವೀಡಿಯೋ ದಲ್ಲಿ ಮತದಾರರು ಸಹ 500 ರೂಪಾಯಿ ತೆಗೆದುಕೊಂಡು ವೋಟ್ ಹಾಕುತ್ತಾರೆ ಎಂದು ಹೇಳಿರುವುದು ಸಹ ಅವಹೇಳನ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.