ದಾವಣಗೆರೆ: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಜಿಲ್ಲೆಯ ನ್ಯಾಮತಿ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 3.72 ಲಕ್ಷ ಮೌಲ್ಯದ 10 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ನ್ಯಾಮತಿ ಪಟ್ಟಣದ ಸುರೆಹೊನ್ನೆ ಸರ್ಕಲ್ ಬಳಿ ಪಿಎಸ್ ಐ ಗಳಾದ ರಮೇಶ್ , ಪ್ರವೀಣ್ ಹಾಗೂ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಶಿವಮೊಗ್ಗ ಕಡೆಯಿಂದ ಬಂದ ಬೈಕ್ ಸವಾರ ದಾಖಲಾತಿ ನೀಡದೆ, ಅನುಮಾಸ್ಪದವಾಗಿ ವರ್ತಿಸಿದ್ದಾನೆ. ಆಗ ಅನುಮಾನಗೊಂಡು ಠಾಣೆಗೆ ಕರೆತಂದು ವಿಚಾರಿಸಿದ್ದಾಗ ಈ ಬೈಕ್ ಕಳ್ಳತನ ಮಾಡಿದ್ದು ಎಂಬುದು ಗೊತ್ತಾಗಿದೆ. ಬಂಧಿತ ಆರೋಪಿ ಕಾರ್ತಿಕ್ (23) ಭದ್ರಾವತಿ ತಾಲ್ಲೂಕಿನ ಶಂಕರಘಟ್ಟ ನಿವಾಸಿಯಾಗಿದ್ದು, ಮೆಕ್ಯಾನಿಕ್ ಆಗಿದ್ದಾನೆ. ನ್ಯಾಮತಿ, ಶಿವಮೊಗ್ಗದ ಕೋಟೆ, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ 3.72 ಲಕ್ಷ ಮೌಲ್ಯದ 10 ಬೈಕ್ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.



