ದಾವಣಗೆರೆ: ಮನೆಗೆ ಹಾಕಿದ್ದ ಬೀಗ ಮುರಿದು, 85 ಸಾವಿರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗಾಂಧಿನಗರ ಠಾಣಾ ವ್ಯಾಪ್ತಿಯ ಎಸ್ ಪಿಎಸ್ ನಗರ ಎರಡನೇ ಹಂತದಲ್ಲಿದ್ದ ಪಾರ್ವತಮ್ಮ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಹಾಗೂ ವೃತ್ತ ನಿರೀಕ್ಷಕ ಗಜೇಂದ್ರಪ್ಪ ನೇತೃತ್ವದ ತಂಡ ಆರೋಪಿಯಾದ ಇಬ್ರಾಹಿಂ ಬಂಧಿಸಿದೆ. ಆರೋಪಿಯಿಂದ 85 ಸಾವಿರ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.



