ದಾವಣಗೆರೆ:ಇಬ್ಬರು ರೈತರ ತೋಟಗಳಲ್ಲಿ ರಾತ್ರೋರಾತ್ರಿ 10 ಕ್ವಿಂಟಾಲ್‌ಗಿಂತಲೂ ಅಧಿಕ ಹಸಿ ಅಡಿಕೆ ಕಳವು ಮಾಡಿದ ಘಟನೆ ತಾಲೂಕಿನ ಮಾಯಕೊಂಡದಲ್ಲಿ ನಡೆದಿದೆ.
ಮಾಯಕೊಂಡ ಗ್ರಾಮದ ಪ್ರಭು ಮತ್ತು ಲೋಕೇಶ್ ಎಂಬ ರೈತರ ಅಡಿಕೆ ತೋಟಗಳಿಗೆ ಅಡಿಕೆ ಕಳ್ಳರು ಕೈಚಳಕ ತೋರಿದ್ದು, 10 ಕ್ವಿಂಟಲ್‌ಗಿಂತಲೂ ಅಧಿಕ ಅಡಿಕೆ ಕಳವು ಮಾಡಿದ್ದಾರೆ. 350ಕ್ಕೂ ಹೆಚ್ಚು ಅಡಿಕೆ ಮರಗಳಲ್ಲಿ 10 ಕ್ವಿಂಟಲ್‌ಗೂ ಅಧಿಕ ಅಡಿಕೆ ಕಳವು ಮಾಡಿದ್ದಾರೆ.
ಮರಗಳಲ್ಲಿದ್ದ ಅಡಿಕೆ ಕೊಯ್ದು, ಅಡಿಕೆ ಬೇರ್ಪಡಿಸಿರುವ ಕಳ್ಳರು, ಅಡಿಕೆ ಕುಂಚಗಳನ್ನು ಅಕ್ಕಪಕ್ಕದ ಹೊಲಗಳಲ್ಲಿ ಬಿಸಾಡಿ ಹೋಗಿದ್ದಾರೆ. ಬೆಳಿಗ್ಗೆ ರೈತ ಪ್ರಭು, ಲೋಕೇಶ ತೋಟಕ್ಕೆ ಬಂದಾಗ ಅಡಿಕೆ ಕಳುವು ಮಾಡಿರುವ ವಿಚಾರ ಇಡೀ ಊರಿನವರಿಗೆ ಗೊತ್ತಾಗಿದೆ. ಈ ಬಗ್ಗೆ ಇಬ್ಬರೂ ಅಡಿಕೆ ಬೆಳೆಗಾರರು ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಡಿಕೆ ಕಳವು ತಡೆಗೆ ದಾವಣಗೆರೆ ತಾಲೂಕಿನಲ್ಲಿ ಈಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ರೈತರೊಂದಿಗೆ ಸಭೆ ನಡೆಸಿ, ಸಾಕಷ್ಟುಎಚ್ಚರಿಕೆ ಕ್ರಮಗಳ ಬಗ್ಗೆ ಸೂಚಿಸಿದ್ದರೂ, ಕಳ್ಳತನ ನಡೆದಿದೆ.