ದಾವಣಗೆರೆ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೆಟಿಜೆ ನಗರ ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ 3.70 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಕೆಟಿಜೆ ನಗರದ ಪಿಎಸ್ ಐ ಮಂಜುಳಾ ಹಾಗೂ ಸಿಬ್ಬಂದಿ ಗಸ್ತಿನಲ್ಲಿರುವಾಗ ನಗರದ ಭಗೀರಥ ಸರ್ಕಲ್ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ರಾಹುಲ್ (25) ಹಾಗೂ ಸಾಗರ್ (23) ಎನ್ನುವರನ್ನು ಬಂಧಿಸಿ ವಿಚಾರಣೆ ಮಾಡದ್ದಾರೆ. ಆಗ ಆರೋಪಿಗಳು ಇತ್ತೀಚೆಗೆ ಬಿಟಿ ಲೇಔಟ್ ನಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳಿಂದ 82 ಗ್ರಾಂ ತೂಕದ ಬಂಗಾರ ಹಾಗೂ 45.850 ಗ್ರಾಂ ಬೆಳ್ಳಿ ಸಾಮಾನು ಸೇರಿ ಒಟ್ಟು 3.71 ಲಕ್ಷ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.



