ದಾವಣಗೆರೆ: ಬಟ್ಟೆ ಒಣಗಿಸಲು ಮನೆ ಮುಂದಿನ ವಿದ್ಯುತ್ ಕಂಬಕ್ಕೆ ತಂತಿಗೆ ಕಟ್ಟಿದ್ದೇ ದಂಪತಿ ಸಾವನ್ನಪ್ಪಲು ಕಾರಣವಾದ ಘಟನೆ ದಾವಣಗೆರೆ ತಾಲೂಕಿನ ಬಾವಿಯಾಳು ಗ್ರಾಮದಲ್ಲಿ ನಡೆದಿದೆ.
ಮನೆ ಮುಂದಿನ ವಿದ್ಯುತ್ ಕಂಬಕ್ಕೆ ಬಟ್ಟೆ ಒಣಗಿಸಲು ತಂತಿ ಕಟ್ಟಿದ್ದಾರೆ. ಮಳೆ ಬರುತ್ತಿದ್ದರಿಂದ ಬಟ್ಟೆ ಒಣಗಿಸಲು ಕಟ್ಟಿದ್ದ ತಂತಿಯಲ್ಲಿ ವಿದ್ಯುತ್ ಪ್ರವಹಿಸಿದೆ. ಇದನ್ನು ಹರಿಯದ ವೀಣಾ (28) ಬಟ್ಟೆ ಹಾಕಲು ಹೋಗಿದ್ದಾರೆ. ಆಗ ವೀಣಾಗೆ ವಿದ್ಯುತ್ ಶಾಕ್ ಹೊಡೆದಿದೆ. ಪತ್ನಿಯನ್ನು ಬಿಡಿಸಲು ಹೋದ ಪತಿ ರವಿಶಂಕರ್ ಗೆ (40) ಸಹ ವಿದ್ಯುತ್ ಶಾಕ್ ಹೊಡರದು ಮೃತಪಟ್ಟಿದ್ದಾರೆ. ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



