ದಾವಣಗೆರೆ: ಜಿಲ್ಲೆಯ ಹರಿಹರ(ಗ್ರಾ) ಠಾಣಾ ವ್ಯಾಪ್ತಿಯ ಸಾಲಕಟ್ಟೆ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕಿರಾಣಿ ಅಂಗಡಿಯಲ್ಲಿ ಕಾನೂನು ಬಾಹಿರ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ 112ಕ್ಕೆ ದೂರು ಬಂದಿದ್ದು, 112 ERV ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಕ್ರಮ ಮದ್ಯ ಮಾರಟ ಮಾಡುತ್ತಿರುವುದು ಕಂಡುಬಂದಿದ್ದು, ಅಕ್ರಮವೆಸಗಿದ ವ್ಯಕ್ತಿ ಮತ್ತು ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಹರಿಹರ (ಗ್ರಾ) ಠಾಣೆಗೆ ಒಪ್ಪಿಸಲಾಗಿದೆ. ಈ ವಿಷಯಕ್ಕೆ ಸಂಭಂದಿಸಿದಂತೆ ಹರಿಹರ (ಗ್ರಾ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.