ದಾವಣಗೆರೆ: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು , ಖೋಟಾನೋಟು ಜಾಲ ಪತ್ತೆ ಮಾಡಿದ್ದಾರೆ. ಒಟ್ಟು 1.20 ಲಕ್ಷ ಖೋಟಾನೋಟು ವಶಕ್ಕೆ ಪಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಯಲ್ಲಮ್ಮನಗರ 4ನೇ ಮೇನ್ ೬ನೇ ಕ್ರಾಸ್ ತೆಲಗಿ ಶೇಖರಪ್ಪನವರ ಮನೆ ಸಮೀಪ ಕಲರ್ ಜೆರಾಕ್ಸ್ ಮಿಷಿನ್‌ನಿಂದ ಜೆರಾಕ್ಸ್ ಮಾಡಿದ ಖೋಟಾ ನೋಟುಗಳನ್ನು ತೆಗೆದುಕೊಂಡು ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ದಾವಣಗೆರೆ ಡಿಸಿಆರ್‌ಬಿ ಘಟಕದ ಪೊಲೀಸ್ ಉಪಾಧೀಕ್ಷಕ ಬಿ ಎಸ್ ಬಸವರಾಜ್ ಹಾಗೂ ಡಿಸಿಆರ್‌ಬಿ ಘಟಕದ ಸಿಬ್ಬಂದಿ ಸ್ಥಳಕ್ಕೆ ದಾಳಿ ಮಾಡಿ ಕಾನೂನುಬಾಹಿರವಾಗಿ ಖೋಟಾ ನೋಟು ಮುದ್ರಣ ಮತ್ತು ಚಲಾವಣೆಗೆ ಸಂಬಂಧಿಸಿದಂತೆ ಆರೋಪಿ ಅಶೋಕ ಎಸ್, ಹಾಲೇಶಿ @ ಅರಸನಾಳು ಹಾಲೇಶಿ, ದಸ್ತಗಿರಿ ಮಾಡಿ ಆರೋಪಿತರಿಂದ 1,20,700 ಖೋಟಾ ನೋಟುಗಳು, 01 ಕಲರ್ ಜೆರಾಕ್ಸ್ ಮಿಷಿನ್ ಹಾಗೂ ಇದಕ್ಕೆ ಸಂಬಂಧಿಸಿದಂತೆ ಇತರೆ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಬಸವರಾಜ್ , ಸಿಬ್ಬಂದಿಗಳಾದ ಕೆ.ಸಿ ಮಜೀದ್, ಕೆ.ಟಿ. ಆಂಜನೇಯ, ಡಿ.ರಾಘವೇಂದ್ರ, ಯು.ಮಾರುತಿ, ಪಿ.ಸುರೇಶ್, ಜೆ.ಹೆಚ್.ಆರ್.ನಟರಾಜ್, ಈ.ಬಿ.ಅಶೋಕ, ಆರ್.ರಮೇಶ್‌ನಾಯ್ಕ್, ಸಿ.ಎಸ್.ಬಾಲರಾಜ್, ಸಿ.ಮಲ್ಲಿಕಾರ್ಜುನ್, ಎಂ.ಹೆಚ್. ಪ್ರಶಾಂತ್ ಕುಮಾರ್ ಹಾಗೂ ನಿಂಗರಾಜ್ ಭಾಗಿಯಾಗಿರುತ್ತಾರೆ. ಈ ಕಾರ್ಯಕ್ಕೆ ಎಸ್ ಪಿ ಸಿ.ಬಿ.ರಿಷ್ಯಂತ್, , ಹೆಚ್ಚುವರಿ ಪೊಲಿಸ್ ಅಧೀಕ್ಷಕ ಆರ್.ಬಿ.ಬಸರಗಿ ಶ್ಲಾಘಿಸಿದ್ದಾರೆ.