ದಾವಣಗೆರೆ: ನಗರದ ಪಿಬಿ ರಸ್ತೆಯ ಆಕ್ಸಿಸ್ ಬ್ಯಾಂಕ್ ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಡಾವಣೆ ಪೊಲೀಸ್ ಠಾಣಿ ವ್ಯಾಪ್ತಿಯಲ್ಲಿ ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿಗಗಳಾದ ಧನಂಜಯ ರಾಜ ಅರಸ ಹಾಗೂ ಸುರೇಶ್ ಆರೋಪಿಗಳನ್ನು ಬಂಧಿಸಿದ್ದಾರೆ. ರಾತ್ರಿ ನಗರದ ಪಿಬಿ ರಸ್ತೆಯ ಆಕ್ಸಿಸ್ ಬ್ಯಾಂಕ್ ಕಾಂಪೌಂಡ್ ಒಳಗೆ ಶಬ್ದ ಕೇಳಿದ್ದರಿಂದ ಪರಿಶೀಲನೆ ನಡೆಸಿದ್ದಾಗ ಕಿಟಕಿ ಸರಳು ಕಟ್ ಮಾಡುವ ಮಷಿನ್ ಹಾಗೂ ಆಕ್ಸಲ್ ಬ್ಲೇಡ್ ನಿಂದ ಕಿಟಕಿ ಕೊರೆಯುತ್ತಿದ್ದ ಮೂವರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಅಣ್ಣೇಶ್ , ನಾವು ಮೂವರು ಬ್ಯಾಂಕ್ ದರೋಡೆಗೆ ಬಂದಿದ್ದೇವು. ನನ್ನ ಜತೆ ಬಂದಿದ್ದ ರಘು, ರಮೇಶ್ ಪೊಲೀಸರನ್ನು ನೋಡಿ ಪರಾರಿ ಆಗಿದ್ದಾರೆ ಎಂದು ತಿಳಿಸಿದ್ದಾನೆ. ಇನ್ನಿಬ್ಬರನ್ನು ಬಂಧಿತ ಆರೋಪಿಯ ಖಚಿತ ಮಾಹಿತಿ ಮೇರೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಬಳಿ ಬಂಧಿಸಿದ್ದಾರೆ.
ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳಿಂದ ಸರಳು ಕಟ್ಟಿಂಗ್ ಮಷಿನ್ , ಅಕ್ಸಲ್ ಬ್ಲೇಡ್ ಹಾಗೂ ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗಳಾದ ಧನಂಜಯ ರಾಜ ಅರಸ ಹಾಗೂ ಸುರೇಶ್ ಅವರನ್ನು ಎಸ್ ಪಿ ರಿಷ್ಯಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.