ದಾವಣಗೆರೆ: ಜಿಲ್ಲೆಯ ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದ ಹೊರವಲಯದ ಒಂಟಿ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ದಂಪತಿಯನ್ನು ಕಟ್ಟಿಹಾಕಿ 16 ಲಕ್ಷ ನಗದು, 15 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ದೋಚಿ ಪರಾರಿಯಾಗಿದ್ದಾರೆ.
ಗುಂಪಾಗಿ ಬಂದ ಕಳ್ಳರು, ನಿನ್ನೆ ರಾತ್ರಿ (ಶುಕ್ರವಾರ) ಮನೆಗೆ ನುಗ್ಗಿ ಮನೆಯ ಮಾಲೀಕ ಮತ್ತು ಅವರ ಪತ್ನಿಯನ್ನು ಕಟ್ಟಿ ಹಾಕಿ ಚಿನ್ನಾಭರಣ ದೋಚಿದ್ದಾರೆ. ಮನೆ ಯ ಲಾಕರ್ ದೊಡ್ಡ ಹಾರೆಯಿಂದ ಹೊಡೆದು ಆಭರಣ ದರೋಡೆ ಮಾಡಿದ್ದಾರೆ. ಹಗ್ಗದಿಂದ ಕಟ್ಟನ್ನು ಬಿಚ್ಚಿಕೊಂಡು ಸಂಬಂಧಿಕರಿಗೆ ಪೋನ್ ಮಾಡಿ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .