ದಾವಣಗೆರೆ: ವೈನ್ ಶಾಪ್ ಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ ಮಾಡಿದ್ದು, ಒಟ್ಟು 8.35 ಲಕ್ಷ ನಗದು, ಸ್ವತ್ತು ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹರಿಹರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕೊಂಡಜ್ಜಿ ಪೂಜಾ ವೈನ್ ಶಾಪ್ , ಹದಡಿ ಪೊಲೀಸ್ ಠಾಣೆಯ ಒಂದು ಪ್ರಕರಣ ಹಾಗೂ ಮಾಯಕೊಂಡ ವ್ಯಾಪ್ತಿಯ ಮೂರು ಪ್ರಕರಣಕ್ಕೆ ಸಬಂಧಿಸಿದಂತೆ ಒಟ್ಟು 5 ಪ್ರಕರಣಗಳಿಂದ ಇಬ್ಬರು ಆರೋಪಿಗಳ ಬಂಧಿಸಿದ್ದಾರೆ. ಆರೋಪಿಗಳಿಂದ 1,35 ಲಕ್ಷ ನಗದು, 7 ಲಕ್ಷ ಬೆಲೆಬಾಳುವ ವಾಹನ ಸೇರಿ ಒಟ್ಟು 8.35 ಲಕ್ಷ ವಶಪಡಿಸಲಾಗಿದೆ. ಹರಿಹರ ವೃತ್ತದ ಸಿಪಿಐ ತಿಮ್ಮಣ್ಣ, ಪಿಎಸ್ ಐಗಳಾದ ವೀರಬಸಪ್ಪ ಕುಸಲಾಪುರ, ಬಿ.ಎಂಅಬ್ದುಲ್ ಖಾದರ್ ಜಿಲಾನಿ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.