ದಾವಣಗೆರೆ: ನಗರದ ಪಿ.ಬಿ. ರಸ್ತೆಯಲ್ಲಿನ ದೇವರಾಜು ಅರಸ್ ಬಡಾವಣೆಯ ದಾವಣಗೆರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‍ನ ಹಿಂಭಾಗದ ಖಾಲಿ ಸೈಟಿನಲ್ಲಿ ಒಣ ಗಾಂಜಾ ಮತ್ತು ಮಾದಕ ವಸ್ತುಗಳನ್ನು ವಶ ಪಡಿಸಿಕೊಂಡಿದ್ದು, ಆರೋಪಿ ಶಾರೀಕ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ದಾವಣಗೆರೆ ನಗರದ ದೇವರಾಜ್ ಅರಸ್ ಬಡಾವಣೆಯ ಅನ್ನಪೂರ್ಣೇಶ್ವರಿ ದೇವಸ್ಥಾನದ ಹತ್ತಿರವಿರುವ 7 ನೇ ಕ್ರಾಸ್ ಎ.ಬ್ಲಾಕ್, ಮ.ನಂ 84 , 30 ವರ್ಷದ ಶಾರೀಕ್ ಬಂಧಿಸಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದಲ್ಲಿ ಅಂದಾಜು ರೂ. 3,500 ಮೌಲ್ಯದ 75 ಗ್ರಾಂ ಒಣ ಗಾಂಜಾ ಮತ್ತು ರೂ.70,000 ಮೌಲ್ಯದ ವಾಹನ ಸೇರಿ ಒಟ್ಟು ಅಂದಾಜು ರೂ.73,500 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಜಂಟಿ ಆಯುಕ್ತರು, (ಜಾರಿ ಮತ್ತು ತನಿಖೆ) ಹೊಸಪೇಟೆ ವಿಭಾಗ ನಿರ್ದೇಶನದ ಮೇರೆಗೆ ದಾವಣಗೆರೆ ಜಿಲ್ಲೆ ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಸಾದ್ ಮಾರ್ಗದರ್ಶನದಲ್ಲಿ ದಾವಣಗೆರೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ರಾಮನಗೌಡ ಮುದಿಗೌಡರ್ ಸಮಕ್ಷಮದಲ್ಲಿ, ಅಬಕಾರಿ ನಿರೀಕಕ್ಷಿ ರಶ್ಮಿ ಕೆ.ಆರ್ , ಅಬಕಾರಿ ಉಪ ನಿರೀಕ್ಷಕ ಮಂಜಪ್ಪ ಎಂ ಮತ್ತು ಸಿಬ್ಬಂದಿಗಳಾದ ಮಂಜುನಾಥ್ ಎನ್, ಅರವಿಂದ್ ಸಿ.ಜಿ, ಸುರೇಶ್ ಉತ್ತನಾಳ, ಮಹಮದ್ ಶಾಹೀನ್ ಹಾಗೂ ವಾಹನ ಚಾಲಕ ಪ್ರದೀಪ್‍ಕುಮಾರ್ ಖಚಿತ ಭಾತ್ಮಿ ಮೇರೆಗೆ ಸಾಗಾಣಿಕೆ ಮಾಡುತ್ತಿದ್ದ 75 ಗ್ರಾಂ ಒಣ ಗಾಂಜಾ ಮತ್ತು ಮಾದಕ ವಸ್ತುಗಳನ್ನು ಪಂಚರ ಸಮಕ್ಷಮ ಇಲಾಖಾ ವಶಕ್ಕೆ ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ದಾವಣಗೆರೆ ಜಿಲ್ಲಾ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



