ದಾವಣಗೆರೆ: ಫ್ರೀ ಬಸ್ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ನೂಕುನುಗ್ಗಲು ಉಂಟಾಗುತ್ತಿದೆ. ಇದೇ ಸಮಯ ಬಳಸಿಕೊಳ್ಳುತ್ತುರುವ ಕಳ್ಳರು, ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಬಸ್ ಹತ್ತಲು ಬಂದಿದ್ದ ಮಹಿಳೆಯೊಬ್ಬರ 1.80 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಕಳ್ಳರು ಎಗರಿಸಿದ ಘಟನೆ ಜಿಲ್ಲೆಯ ಹರಿಹರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಹರಿಹರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹುಬ್ಬಳ್ಳಿಯ ಉಣಕಲ್ ನಿವಾಸಿ ಶೋಭಾ ಎಂಬುವವರು, 1.80 ಲಕ್ಷ ಮೌಲ್ಯದ 37 ಗ್ರಾಂ ತೂಕದ ಮಾಂಗಲ್ಯ ಸರ ಕಳೆದುಕೊಂಡವರಾಗಿದ್ದಾರೆ. ಪತಿ ಕೊಟ್ರೇಶ ಜತೆ ಶೋಭಾ, ಹುಬ್ಬಳ್ಳಿಯಿಂದ ಹೊನ್ನಾಳಿಯ ಹಿರೇಕಲ್ಮಠಕ್ಕೆ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಪೂಜೆ ಸಲ್ಲಿಸಲು ಬಂದಿದ್ದರು. ವಾಪಸ್ ಊರಿಗೆ ಹೋಗುವಾಗ ಹರಿಹರ ಬಸ್ ನಿಲ್ದಾಣದಲ್ಲಿ ಬಸ್ ಬದಲಾವಣೆ ಮಾಡಿಕೊಳ್ಳುವಾಗ ಈ ಕಳ್ಳತನ ಆಗಿದೆ ಎಂದು ಪ ಹರಿಹರ ನಗರ ಠಾಣೆ ಪ್ರಕರಣ ದಾಖಲಿಸಿದ್ದಾರೆ.



