ದಾವಣಗೆರೆ: ನಗರದ ಜೆ.ಎಚ್. ಪಟೇಲ್ ಬಡಾವಣೆಯ ಸ್ಟೇಡಿಯಂ ಹತ್ತಿರ ನಕಲಿ ಬಂಗಾರ ಮಾರಾಟ ಮಾಡುತ್ತಿದ್ದ 5 ಆರೋಪಿಗಳನ್ನು ಸಿಇಎನ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 3 ಕೆಜಿ 422 ಗ್ರಾಂ ನಕಲಿ ಬಂಗಾರ, ಕೃತ್ಯಕ್ಕೆ ಉಪಯೋಗಿಸಿದ ಮಾರುತಿ 800 ಕಾರು, 01 ಬೈಕ್ ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಉಳಿತ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೈವೈಎಸ್ ಪಬಿ.ಎಸ್. ಬಸವರಾಜ ಮಾರ್ಗದರ್ಶನದಲ್ಲಿ ಸಿಇಎನ್ ಅಪರಾಧ ವಿಭಾಗದ ವೃತ್ತ ನಿರೀಕ್ಷಕ ಬಿ.ವಿ. ಗಿರೀಶ್ ಸಿಬ್ಬಂದಿಗಳಾದ ಪ್ರಕಾಶ್, ನಾಗರಾಜ, ಗೋವಿಂದರಾಜು, ಲೋಹಿತ್, ಮಲ್ಲಿಕಾರ್ಜುನ, ಮುತ್ತುರಾಜ, ದ್ಯಾಮೇಶ್ ಒಳಗೊಂಡ ತಂಡ ದಾಳಿ ಮಾಡಿದೆ.