ದಾವಣಗೆರೆ: ರಾತ್ರಿ ಪಾರ್ಟಿಗೆ ತೆರಳಿದ್ದ ಯುವಕನಿಗೆ ಚಾಕುನಿಂದ ಇರಿದು ಕೊಲೆ ಮಾಡಲಾಗಿದೆ. ಓಬಜ್ಜಿಹಳ್ಳಿ ಗ್ರಾಮದ ಬಳಿ ಬುಧವಾರ ತಡ ರಾತ್ರಿ ಯುವಕನ ಕೊಲೆ ನಡೆದಿದೆ.
ದಾವಣಗೆರೆಯ ಬೂದಾಳ್ ರಸ್ತೆಯ ನಿವಾಸಿ ಸಂದೀಪ್ (25) ಕೊಲೆಯಾದ ಯುವಕ. ಸಂದೀಪ್ ಈಗಾಗಲೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಕೇಸ್ ಗಳಿವೆ. ರಾತ್ರಿ ಪಾರ್ಟಿ ಮಾಡಲು ಹೋಗಿದ್ದಾಗ ಸಂದೀಪ್ ಕೊಲೆ ನಡೆದಿದೆ. ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು, ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಬಂಧನಕ್ಕೆ ತಂಡ ರಚಿಸಲಾಗಿದೆ.



