ದಾವಣಗೆರೆ: ಕಷ್ಟಪಟ್ಟು ಬೆಳೆಸಿದ ಮೂರು ವರ್ಷದ 30ಕ್ಕೂ ಹೆಚ್ಚು ಅಡಿಕೆ ಮರವನ್ನು ದುಷ್ಕರ್ಮಿಗಳು ನಾಶ ಮಾಡಿದ ಘಟನೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಸಪ್ಪ ನವಿಲೇರ ಎಂಬುವವರ ಜಮೀನಿನಲ್ಲಿ ಕಿಡಿಗೇಡಿಗಳು ರಾತ್ರೋರಾತ್ರಿ 30ಕ್ಕೂ ಹೆಚ್ಚು ಮರ ಕಡಿದು ಹಾಕಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ನ್ಯಾಮತಿ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ: ಹೊಸ ರಾಶಿ ಅಡಿಕೆ 1, 200 ರೂ. ಏರಿಕೆ; ಹಳೆಯ ಅಡಿಕೆ 2 ಸಾವಿರ ಕುಸಿತ..!



