ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನದಿಂದ ಏರಿಕೆಯಾಗುತ್ತಿದ್ದ ಕೊರೊನಾ ಪಾಸಿಟಿವ್ ಕೇಸ್ ಗಳ ಸಂಖ್ಯೆ ಇಂದು ತಗ್ಗಿದ್ದು, ಒಂದೇ ದಿನ 105 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 24,960ಕ್ಕೆ ಏರಿಕೆಯಾಗಿದೆ.
ಇಂದು 181 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವೆಗೆ ಒಟ್ಟು 23,227 ಮಂದಿ ಗುಣಮುಖರಾಗಿದ್ಧಾರೆ. ಜಿಲ್ಲೆಯಲ್ಲಿ ಇದುವರೆಗೆ 267 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 1466 ಮಂದಿ ಸಕ್ರಿಯ ಕೇಸ್ ಗಳಿವೆ. ದಾವಣಗೆರೆ 57, ಹರಿಹರ 19, ಜಗಳೂರು 03, ಚನ್ನಗಿರಿ 12, ಹೊನ್ನಾಳಿ 07, ಹೊರ ಜಿಲ್ಲೆಯಿಂದ 07 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.



