Connect with us

Dvgsuddi Kannada | online news portal | Kannada news online

ದಾವಣಗೆರೆ: ನರ್ಸಿಂಗ್ ಕಾಲೇಜು 25 ವಿದ್ಯಾರ್ಥಿಗಳು ಸೇರಿ 47 ಮಂದಿಗೆ ಕೊರೊನಾ ಪಾಸಿಟಿವ್

ದಾವಣಗೆರೆ

ದಾವಣಗೆರೆ: ನರ್ಸಿಂಗ್ ಕಾಲೇಜು 25 ವಿದ್ಯಾರ್ಥಿಗಳು ಸೇರಿ 47 ಮಂದಿಗೆ ಕೊರೊನಾ ಪಾಸಿಟಿವ್

ದಾವಣಗೆರೆ: ನಗರದ ಖಾಸಗಿ ನರ್ಸಿಂಗ್ ಕಾಲೇಜಿನ 25 ವಿದ್ಯಾರ್ಥಿನಿಯರು ಸೇರಿ, 47 ಜನರಲ್ಲಿ ಇಂದು ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ.

ನರ್ಸಿಂಗ್ ವಿದ್ಯಾರ್ಥಿಗಳು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರೆಲ್ಲರೂ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ವಾಸವಿದ್ದರು. ಅಲ್ಲಿನ 134 ವಿದ್ಯಾರ್ಥಿನಿಯರು, 15 ಜನ ಅಡುಗೆ ಸಿಬ್ಬಂದಿ ಮತ್ತು ಪರಿಚಾರಕರ ಗಂಟಲು ಮಾದರಿ ದ್ರವ ಪಡೆಯಲಾಗಿದೆ. ವಿದ್ಯಾರ್ಥಿನಿಲಯವನ್ನು ಕಂಟೈನ್ ಮೆಂಟ್ ಜೋನ್ ಎಂದು ಜಿಲ್ಲಾಧಿಕಾರಿಗಳು ಆದ್ದೇಶಿಸಿದ್ದಾರೆ.

ಇಂದು ಕೇವಲ 3 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಯಾವುದೇ ಸಾವು ಸಂಭವಿಸಿಲ್ಲ.ಈವರೆಗೆ 22,771 ಜನರಿಗೆ ಸೋಂಕು ತಗುಲಿದಂತಾಗಿದ್ದು, 22,317 ಸೋಂಕಿತರು ಗುಣಮುಖ ಕಂಡಂತಾಗಿದೆ. 264 ಜನರು ಬಲಿಯಾಗಿದ್ದಾರೆ. ಇನ್ನು 170 ಸಕ್ರಿಯ ಪ್ರಕರಣಗಳಿವೆ.ದಾವಣಗೆರೆ 39, ಹರಿಹರ, ಚನ್ನಗಿರಿ ತಲಾ 1, ಹೊನ್ನಾಳಿ 4, ಹೊರ ಜಿಲ್ಲೆಯ ಇಬ್ಬರಿಗೆ ಸೋಂಕು ಪತ್ತೆಯಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top