ದಾವಣಗೆರೆ: ಜಿಲ್ಲೆಯಲ್ಲಿ ಇಂದು ಒಂದೇ ದಿನ ಜಿಲ್ಲೆಯಲ್ಲಿ 242 ಕೇಸ್ ಗಳು ಪತ್ತೆಯಾಗಿದೆ. ಒಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ದಾವಣಗೆರೆ ಒಂದರಲ್ಲಿಯೇ 157 ಪ್ರಕರಣಗಳು ಪತ್ತೆಯಾಗಿವೆ.
ಈ ಮೂಲಕ ಸೋಂಕಿತರ ಸಂಖ್ಯೆ 24,855ಕ್ಕೆ ಏರಿಕೆಯಾಗಿದೆ. ಇಂದು 96 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ 23,043 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 267 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 1542 ಸಕ್ರಿಯ ಕೇಸ್ ಗಳಿವೆ.
ದಾವಣಗೆರೆ 157, ಹರಿಹರ 24, ಜಗಳೂರು 16, ಚನ್ನಗಿರಿ 24, ಹೊನ್ನಾಳಿ 09 ಹಾಗೂ ಹೊರ ಜಿಲ್ಲೆಯಿಂಧ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.



