ದಾವಣಗೆರೆ: ಜಿಲ್ಲೆಯಲ್ಲಿಂದು 317 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 2 ಮಂದಿ ಸಾವನ್ನಪ್ಪಿದ್ದಾರೆ.
ದಾವಣಗೆರೆ 209, ಹರಿಹರ 39, ಜಗಳೂರು 17, ಚನ್ನಗಿರಿ16, ಹೊನ್ನಾಳಿ17 , ಹೊರ ಜಿಲ್ಲೆಯಿಂದ 17 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.ಈ ಮೂಲಕ ಸೋಂಕಿತರ ಸಂಖ್ಯೆ 26,793ಕ್ಕೆ ಏರಿಕೆಯಾಗಿದೆ. ಇಂದು 264 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವೆಗೆ ಒಟ್ಟು 24,360 ಮಂದಿ ಗುಣಮುಖರಾಗಿದ್ಧಾರೆ. ಜಿಲ್ಲೆಯಲ್ಲಿ ಇದುವರೆಗೆ 285 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 2148 ಸಕ್ರಿಯ ಕೇಸ್ ಗಳಿವೆ. ಮಾಯಕೊಂಡದ 60 ವರ್ಷದ ವೃದ್ಧ ಹಾಗೂ ಕೈದಾಳದ 33 ವರ್ಷದ ಪುರುಷ ಸಾವನ್ನಪ್ಪಿದ್ದಾರೆ.