ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದಿಂದ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ನಿರ್ಮೂಲನೆಗಾಗಿ ಅಧ್ಯಕ್ಷ ದೇವರಮನಿ ಶಿವಕುಮಾರ್ ನೇತೃತ್ವದಲ್ಲಿ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಲಾಯಿತು.
ನಂತರ ಮಾತನಾಡಿದ ಅವರು, ದೇಶ ಮತ್ತು ವಿಶ್ವ ವ್ಯಾಪ್ತಿಯಲ್ಲಿ ಕೊರೊನಾ ಮಹಾಮಾರಿ ಆವರಿಸಿದೆ. ಇದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಈ ಕೊರೊನಾ ನಮ್ಮ ದೇಶದಿಂದ ನಿರ್ಮೂಲನೆ ಆಗಲಿ ಎಂದು ಶ್ರೂ ಗುರು ಶಿವಯೋಗಿ ಬಕ್ಕೇಶ್ವರ ದೇವರಲ್ಲಿ ಬೇಡಿಕೊಂಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವನಗೌಡ ಟಿ ಪಾಟೀಲ್, ಸೋಗಿ ಶಾಂತಕುಮಾರ್, ಮಹಾಸಭಾದ ಶ್ರೀಧರ ಪಾಟೀಲ್, ಶ್ರೀಕಾಂತ್ ನಿಲಗುಂದ, ಟಿಂಕರ್ ಮಂಜಣ್ಣ, ಜಯಪ್ರಕಾಶ್ ಮಾಗಿ,ಕರಿವಪ್ಳರ್ ಸಿದ್ದೇಶ್,ದೇವೇಂದ್ರಪ್ಪ,ಶಿವಾನಂದ ಬೆನ್ನುರ್,ನಾಗರಾಜ್ ಅಂಗಡಿ, ಅಭಿಷೇಕ ಪಿ.ಎಳೇಹೊಳೆ,ಗುರು ಸೊಗಿ,ಗುಡಿಹಳ್ಳಿ ಬಸವರಾಜ್,ಅಣಜಿ ಪ್ರಶಾಂತ್, ಮಹಿಳಾ ಘಟದ ಶೋಭಾ ಕೊಟ್ರೇಶ್,ಪುಷ್ಪ ವಾಲಿ,ದ್ರಾಕ್ಷಾಯಣಿ ಅಂದಾನಪ್ಪ,ಮಂಜುಳಾ ಕೆ.ಇ,ರತ್ತಾ ಸದಾಶಿವ, ಮತ್ತಿತರರು ಪಾಲ್ಗೊಂಡಿದ್ದರು.



