ದಾವಣಗೆರೆ: ತೀವ್ರ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ 2 ವರ್ಷ 11 ತಿಂಗಳ ಮಗು ಸಾವನ್ನಪ್ಪಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕೊಡ ಗ್ರಾಮದಲ್ಲಿ ನಡೆದಿದೆ.
ಮೃತ ಮಗುವನ್ನು ಚಿಕ್ಕೊಡ ಗ್ರಾಮದ ರಾಜಪ್ಪ ಮತ್ತು ದಿವ್ಯ ದಂಪತಿಯ 2 ವರ್ಷದ 11 ತಿಂಗಳ ನಿರ್ವಾಣ ಕುಮಾರ್ ಎಂದು ಗುರುತಿಸಲಾಗಿದೆ.5 ದಿನಗಳಿಂದ ಮಗು ತೀವ್ರ ಜ್ವರದಿಂದ ಬಳಲುತ್ತಿತ್ತು. ಚಿಕಿತ್ಸೆಗಾಗಿ ಮಗುವನ್ನು ಜಿಲ್ಲೆಯ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕವು ಸ್ವಲ್ಪವೂ ಚೇತರಿಕೆ ಕಾಣದೇ ಮಗು ಸಾವನ್ನಪ್ಪಿದೆ.