ದಾವಣಗೆರೆ: ಕಳೆದ ವರ್ಷದ ತೀವ್ರ ಬರ, ಮಳೆ ಕೊರತೆಯಿಂದ ಬರಿದಾಗಿದ್ದ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಏಷ್ಯಾ ಖಂಡದ ಎರಡನೇ ದೊಡ್ಡ ಕೆರೆ ಸೂಳೆಕೆರೆ (ಶಾಂತಿ ಸಾಗರ ), ಈ ವರ್ಷದ ಮಳೆ ಅಬ್ಬರಕ್ಕೆ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದೆ. ಪೂರ್ಣ ಭರ್ತಿಯಾಗಿ ಕೋಡಿ ಬೀಳಲು ಕೇವಲ ಒಂದು ಅಡಿ ಮಾತ್ರ ಬಾಕಿ ಇದೆ.
ಈ ವರ್ಷ ಮುಂಗಾರು ಮಳೆ ಜೊತೆ ಹಿಂಗಾರು ಮಳೆ ಸಹ ಜಿಲ್ಲೆಯಲ್ಲಿ ಅಬ್ಬರಿಸಿ ಬೊಬ್ಬಿರಿದಿದೆ. ಭದ್ರಾ ಜಲಾಶಯ ನಾಲೆ ನೀರಿನಿಂದ ಭರ್ತಿಯಾಗುವ ಸೊಳೆಕೆರೆ (Sulekere) ಒಳ ಹರಿವು ಹೆಚ್ಚಿದೆ. ಇದಲ್ಲದೆ, ಕಳೆದ 15 ದಿನದಿಂದ ಸೊಳೆ ಕೆರೆ ಸುತ್ತಲಿನ ಪ್ರದೇಶದಲ್ಲಿ ಭಾರೀ ಮಳೆಯಿಂದ ಕೆರೆಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಸೊಳೆಕೆರೆ ಭರ್ತಿಗೆ 27 ಅಡಿ ನೀರಿನ ಅಗತ್ಯವಿದ್ದು, ಪ್ರಸ್ತುತ ನೀರಿನ ಮಟ್ಟ 26ಯಡಿಷ್ಟಿದೆ. ಸೊಳೆಕೆರೆ ಮೈದುಂಬಿದ ದೃಶ್ಯ ಕಣ್ಮನ ಸೆಳೆಯುತ್ತಿದೆ, ಭರ್ತಿ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಬರುತ್ತಿದ್ದಾರೆ. ಹಿರೇಹಳ್ಳ ತುಂಬಿ ಹರಿಯುತ್ತಿದೆ. ಹಿಗಾಗಿ ಸೂಳೆಕೆರೆ 27 ಅಡಿ ತಲುಪಿ ಕೆರೆಬಿಳಚಿ ಸಮೀಪದ ಕೋಡಿ ಪ್ರದೇಶದಿಂದ ನೀರು ಹೋರಬೀಳಲುಕ್ಷಣಗಣನೆ ಆರಂಭವಾಗಿದೆ.
ಸೂಳೆಕರೆ ನೀರು ಗರಿಷ್ಠ ಮಟ್ಟ ತಲುಪಿರುವುದರಿಂದ ಕೆರೆ ಹಿನ್ನೀರು ಹೊಲಗಳಿಗೆ ನೀರು ನುಗ್ಗುವ ಭೀತಿ ರೈತರಲ್ಲಿದೆ. ಮೆಕ್ಕೆಜೋಳ, ಅಡಿಕೆ ಅಪಾರ ಹಾನಿ ಆಗಲಿದೆ. 2022ರಲ್ಲಿ ಸೂಳೆಕೆರೆ ಕೋಡಿ ಬಿದ್ದಿತ್ತು. ಈಗ ಈದೀಗ ಎರಡು ವರ್ಷದ ನಂತರ ಭರ್ತಿಯಾಗಿದೆ. ಕಳೆದ ವರ್ಷ (2023) ಮಳೆ ಕೊರತೆಯಿಂದ ಕೆರೆ ನೀರು ಬಹುತೇಕ ಖಾಲಿಯಾಗಿತ್ತು.