ದಾವಣಗೆರೆ: ಕೌಟಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ ಮಗಳನ್ನು ಹೊಯ್ಸಳ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಚನ್ನಗಿರಿ ತಾಲೂಕಿನ ನಲ್ಲೂರಿನ ಓರ್ವ ಮಹಿಳೆ ಮತ್ತು ಮಗಳು ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿ ಶಾಂತಿಸಾಗರ (ಸೂಳೆಕೆರೆ) ದ ಬಳಿ ಬಂದಿದ್ದರು. ಆ ಸಂಧರ್ಭದಲ್ಲಿ ಅಲ್ಲಿಯೇ ಇದ್ದ ಗೃಹ ರಕ್ಷಕ ಸಿಬ್ಬಂದಿ ಪುನೀತ್ ಎಂಬುವವರು ಕೂಡಲೇ 112 ಕ್ಕೆ ಕರೆಮಾಡಿ ಮಾಹಿತಿ ನೀಡಿದರು. ತಕ್ಷಣ 112 ಕರ್ತವ್ಯ ಅಧಿಕಾರಿ ASI ದೇವೇಂದ್ರಪ್ಪ ಮತ್ತು ಚಾಲಕ ಸೈಯದ್ ಅಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ನೊಂದ ಮಹಿಳೆಯನ್ನು ಉಪಚರಿಸಿದ್ದಾರೆ.
ಮಹಿಳೆ ಬಗ್ಗೆ ಹಾಗೂ ಘಟನೆ ಬಗ್ಗೆ ಮಾಹಿತಿ ಪಡೆದು ಸದರಿ ಮಹಿಳೆಗೆ ಸಾಂತ್ವನ ಹೇಳಿ ಚನ್ನಗಿರಿ ಪೊಲೀಸ್ ಠಾಣಾಧಿಕಾರಿಗಳಿಗೆ ಮಾಹಿತಿ ನೀಡಿರುತ್ತಾರೆ. ಸದರಿ ಮಹಿಳೆಯ ಮನೆಯವರನ್ನು ಸಂಪರ್ಕಿಸಿ ಸೂಕ್ತ ಬುದ್ಧಿವಾದ ಹೇಳಿ ಅವರ ಕುಟುಂಬದೊಂದಿಗೆ ಕಳುಹಿಸಿರುತ್ತಾರೆ.ಯಾವುದೇ ತುರ್ತು ಸೇವೆಗಾಗಿ ತುರ್ತು ಸಹಾಯ ವಾಣಿ 112 ಕ್ಕೆ ಕರೆ ಮಾಡಿ.



