ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ಚಾರ್ಜರ್ ಬೈಕ್ ಸ್ಫೋಟಗೊಂಡಿದೆ. ಇದ್ದಕ್ಕಿದ್ದಂತೆ ಚಾರ್ಜರ್ ಬೈಕ್ ನಲ್ಲಿ ಹೊಗೆ ಬಂದು ಬೆಂಕಿ ಹತ್ತಿಕೊಂಡ ಇಂಜಿನ್ ಸಂಫೂರ್ಣ ಸುಟ್ಟು ಹೋಗಿದೆ. ಇದರಿಂದ ಚಾರ್ಜರ್ ಬೈಕ್ ಖರೀದಿದಾರರು ಇನ್ಮುಂದೆ ಎಚ್ಚರ ವಹಿಸಬೇಕಿದೆ.
ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ. ಎಂ. ಜಯಪ್ಪ ಎಂಬುವರಿಗೆ ಸೇರಿದ ಬೈಕ್ ಇದಾಗಿದ್ದು, ಮಾಲೀಕರು ಕಳೆದ 10 ತಿಂಗಳ ಹಿಂದೆ ಬೈಕ್ ಖರೀದಿಸಿದ್ದರು. ಬೈಕ್ ನಲ್ಲಿ ಇಂದು ಬೆಳಿಗ್ಗೆ ಹೊಗೆ ಕಾಣಿಸಿಕೊಂಡು ನಂತರ ಬೆಂಕಿಗೆ ಆಹುತಿ ಆಗಿದೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ವಿಡಿಯೋ: https://fb.watch/h5KWJVSLI_/



