ದಾವಣಗೆರೆ: ಬೈಕ್ ಗೆ ಹಿಂದಿನಿಂದ ಅತಿ ವೇಗವಾಗಿಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃ*ತಪಟ್ಟ ಘಟನೆ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಬಳಿ ನಡೆದಿದೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಮಾವಿನಕಟ್ಟೆಯ ರಂಗನಾಥ್ (35) ಮತ್ತು ಬಳ್ಳಾರಿ ಮೂಲದ ಮಧು(33) ಸಾವನ್ನಪ್ಪಿದವರು. ಈ ಇಬ್ಬರು ಬೈಕ್ ನಲ್ಲಿ ಚನ್ನಗಿರಿ ಕಡೆ ತೆರಳುತ್ತಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಕಾರು ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸಕ್ಕೆ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃ*ತಪಟ್ಟಿದ್ದಾರೆ.
ಇನ್ನೂ ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ. ಮೃತಪಟ್ಟಿರುವ ರಂಗನಾಥ್ ಗೆ ಮದುವೆಯಾಗಿ ಕೇವಲ 3 ತಿಂಗಳಾಗಿತ್ತು. ಜೆಸಿಬಿ ಮಾಲೀಕನಾದ ಮಧುಗೆ ಇನ್ನೂ ಮದುವೆ ಆಗಿರಲಿಲ್ಲ.