ದಾವಣಗೆರೆ: ಸಿಮೆಂಟ್ ತುಂಬಿದ ಲಾರಿಯೊಂದು ಪಾದಚಾರಿ ಯುವಕನ ಮೇಲೆ ಹರಿದ ಪರಿಣಾಮ, ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ಚನ್ನಗಿರಿ ರಾಷ್ಟ್ರೀಯ ಹೆದ್ದಾರಿ 13 ರ ಸಂತೋಷ್ ಡಾಬಾ ಬಳಿ ಈ ಘಟನೆ ನಡೆದಿದೆ. ಅರೆತೋಳ ಕೈಮರ ಗ್ರಾಮದ 25 ವರ್ಷದ ಹರೀಶ್ ಮೃತಪಟ್ಟ ಯುವಕನಾಗಿದ್ದಾನೆ. ಲಾರಿಯ ರಭಸವಾದ ಹೊಡೆತಕ್ಕೆ ಹರೀಶ್ ತಲೆ, ದೇಹ ಛಿದ್ರವಾಗಿ ಹೋಗಿದೆ. ಸ್ಥಳಕ್ಕೆ ಚನ್ನಗಿರಿ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದು, ಲಾರಿ ಡ್ರೈವರ್ ಮತ್ತು ಕ್ಲಿನರ್ ವಶಕ್ಕೆ ಪಡೆಯಲಾಗಿದೆ.



