ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಏಷ್ಯಾದ ಎರಡನೇ ದೊಡ್ಡ ಕೆರೆ ಸೂಳೆಕೆರೆಗೆ ಪ್ರಸ್ತುತ 20 ಲಕ್ಷ ಮೀನು ಮರಿಗಳನ್ನು ಬಿಡಲಾಗಿದೆ. ಮುಂದಿನ ದಿನಗಳಲ್ಲಿ 40 ಲಕ್ಷ ಮೀನಿನ ಮರಿಗಳನ್ನು ಬಿಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಹೇಳಿದರು.
ದಾವಣಗೆರೆ: ಮನೆ ಬೀಗ ಮುರಿದು ಕಳ್ಳತನ; 12 ತಾಸಿನಲ್ಲಿ ಆರೋಪಿ ಬಂಧನ | 6.40 ಲಕ್ಷ ಮೌಲ್ಯದ ಚಿನ್ನ ವಶ
900 ಕುಟುಂಬಗಳು ಮೀನುಗಾರಿಕೆ
ಸೂಳೆಕೆರೆಗಡ ಮೀನು ಮರಿ ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ, ಸೂಳೆಕೆರೆ ಸುತ್ತಲಿನ 22 ಗ್ರಾಮಗಳ ಅಂದಾಜು 900 ಕುಟುಂಬಗಳು ಮೀನುಗಾರಿಕೆಗಾಗಿ ಸೂಳೆಕೆರೆಯನ್ನೇ ಅವಲಂಬಿಸಿವೆ. ಕಾಟ್ಲಾ, ರಹೂ, ಗೌರಿ, ಮುರುಗಲ್ ತಳಿಯ ಮೀನು ಮರಿಗಳನ್ನು ಬಿಡಲಾಗಿದ್ದು, ಮುಂದಿನ 15 ದಿನಗಳ ಒಳಗಾಗಿ ಮತ್ತೆ 20 ಲಕ್ಷ ಮೀನು ಮರಿಗಳನ್ನು ಈ ಕೆರೆಗೆ ಬಿಡಲಾಗುವುದು ಎಂದರು.
ದಾವಣಗೆರೆ: ಮಹಿಳೆ ಸಾವಿಗೆ ಕಾರಣವಾದ ರಾಟ್ವೀಲರ್ ನಾಯಿಗಳು ಸಾವು; ನಾಯಿ ಮಾಲೀಕ ಅರೆಸ್ಟ್
ಸಿಹಿನೀರು ಮೀನಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ
ಜಿಲ್ಲಾ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಅಣ್ಣಪ್ಪಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಸಿಹಿನೀರು ಮೀನಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಅದರಲ್ಲೂ ಸೂಳೆಕೆರೆಯ ಮೀನು ಪ್ರಸಿದ್ಧವಾಗಿದೆ. ಜೂನ್, ಜುಲೈ ಹೊರತುಪಡಿಸಿ ಉಳಿದ ಹತ್ತು ತಿಂಗಳೂ ಸೂಳೆಕೆರೆಯಲ್ಲಿ ಮೀನುಗಾರಿಕೆ ನಡೆಯುತ್ತದೆ. ಇಲ್ಲಿ ಹೆಚ್ಚು ಮೀನುಗಳು ದೊರೆಯುವುದರಿಂದ ಪ್ರತಿವರ್ಷ ಹೆಚ್ಚು ಹೆಚ್ಚು ಮೀನು ಮರಿಗಳನ್ನು ಕೆರೆಗೆ ಬಿಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ.ಆರ್. ಪ್ರಾಜೆಕ್ಟ್ ಮೀನುಗಾರಿಕಾ ಉಪನಿರ್ದೇಶಕ ಪ್ರಸನ್ನಕುಮಾರ್, ತಾಲ್ಲೂಕು ಸಹಾಯಕ ನಿರ್ದೇಶಕಿ ದೀಪಶ್ರೀ, ಬೋಟಿಂಗ್ ವ್ಯವಸ್ಥಾಪಕ ಸೋಮಶೇಖರ್, ಮೀನುಗಾರರ ಸಂಘದ ಅಧ್ಯಕ್ಷೆ ಗೌರಮ್ಮ ಫಕೀರಪ್ಪ, ಉಪಾಧ್ಯಕ್ಷ ರಂಗಪ್ಪ, ಕಾರ್ಯದರ್ಶಿ ಪಿ.ಲಕ್ಷ್ಮಣ, ಸದಸ್ಯ ದಶರಥ, ನಾಗರಾಜ್ ಹಾಗೂ ಸುತ್ತಲಿನ ಗ್ರಾಮಗಳ ಮೀನುಗಾರರು ಪಾಲ್ಗೊಂಡಿದ್ದರು.



