ದಾವಣಗೆರೆ: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಕಲ್ಲೇಶ್ವರ ಮಿಲ್ ಹಿಂದಿನ ಫಾರ್ಮ್ ಹೌಸ್‌ನಲ್ಲಿ ಪತ್ತೆಯಾಗಿದ್ದ ವನ್ಯ ಜೀವಿಗಳಲ್ಲಿ ಎರಡು ಪ್ರಾಣಿಗಳು ಮೃತಪಟ್ಟಿವೆ. ಕೃಷ್ಣಮೃಗ ಮತ್ತು ಕಾಡುಹಂದಿ ಮೃತಪಟ್ಟಿವೆ.
ಜಿಂಕೆ, ಕೃಷ್ಣಮೃಗ ಸೇರಿ ವಿವಿಧ ಪ್ರಾಣಿಗಳನ್ನು ತಾಲೂಕಿನ ಆನಗೋಡು ಕಿರುಮೃಗಾಲಯಕ್ಕೆ ಬಿಡಲಾಗಿತ್ತು. ಕೆಲವು ಕಾಡು ಹಂದಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು. ಆ ವನ್ಯ ಜೀವಿಗಳಲ್ಲಿ 2 ಪ್ರಾಣಿಗಳು ಮೃತಪಟ್ಟಿವೆ.
ಡಿ.21 ರಂದು ನಗರದ ಬಂಬೂ ಬಜಾರ್ ರಸ್ತೆಯಲ್ಲಿರುವ ಮಲ್ಲಿಕಾರ್ಜುನ ಅವರ ಫಾರ್ಮ್ ಹೌಸ್ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದ ವೇಳೆ ಪ್ರಾಣಿಗಳು ಪತ್ತೆಯಾಗಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಸ್ಥಳಾಂತರಿದ್ದರು. ಕೋರ್ಟ್ ಸೂಚನೆ ಮೇರೆಗೆ ಕಿರುಮೃಗಾಲಯಕ್ಕೆ ಬಿಡಲಾಗಿತ್ತು. ಇದೀಗ ಕೃಷ್ಣಮೃಗ ಮತ್ತು ಒಂದು ಕಾಡು ಹಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಮೃತ ಪ್ರಾಣಿಗಳ ಕಳೇಬರವನ್ನು ವಿಲೇವಾರಿ ಮಾಡಲಾಗಿದೆ. ವಾತಾವರಣ ಬದಲಾವಣೆಯಾದ ಹಿನ್ನೆಲೆಯಲ್ಲಿ ಮೃತಪಟ್ಟಿರುವ ಸಾಧ್ಯತೆ ಇದೆ.



