ದಾವಣಗೆರೆ: ಸರ್ಕಾರ ಬಿಡುಗಡೆಗೆ ಹೊರಟಿರುವ ಜಾತಿಗಣತಿ ವರದಿಯನ್ನು ನಾವು ಒಪ್ಪುವುದಿಲ್ಲ. ಹೊಸದಾಗಿ ಜಾತಿಗಣತಿ ಮಾಡಿ ಬಿಡುಗಡೆ ಮಾಡಲಿ ಎಂದು ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಮೊದಲಿನಿಂದಲೂ ಹೊಸದಾಗಿ ಜಾತಿಗಣತಿ ಮಾಡಲಿ ಮನವಿ ಮಾಡುತ್ತಲೇ ಬಂದಿದ್ದೇವೆ. ವೀರಶೈವ ಲಿಂಗಾತರ ಒಳ ಪಂಗಡಗಳನ್ನು ಅದರಲ್ಲಿ ಬೇರೆ ಬೇರೆಯಾಗಿ ಗಣತಿ ಮಾಡಿ ವೀರಶೈವ ಲಿಂಗಾಯತರ ಒಟ್ಟು ಸಂಖ್ಯೆ ಕಡಿಮೆ ತೋರಿಸಲಾಗಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ದಲಿತರಾಗಲಿ ಯಾರೇ ಆಗಲಿ ಒಳ್ಳೆಯವರಾಗಲಿ. ಆದರೆ, ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ. ನನಗೆ ವಯಸ್ಸಾಗಿಲ್ಲ. ಕುರ್ಚಿ ಖಾಲಿ ಇಲ್ಲ. ಖಾಲಿ ಆದ ಮೇಲೆ ನೋಡೋಣ ಎಂದರು.ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿಲ್ಲ. ಬಿಜೆಪಿಯವರು ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರ ಜಾಗವನ್ನು ಸ್ವಾಧೀನ ಪಡಿಸಿಕೊಂಡಿದ್ದಕ್ಕೆ ಅವರಿಗೆ ಸೈಟ್ ಕೊಟ್ಟಿದ್ದಾರೆ. ಬಿಜೆಪಿಯವರ ಆರೋಪ ಮಾಡುತ್ತಿರುವುದಕ್ಕೆ ಪಾಪ ಅವರ ಪತ್ನಿ ಸೈಟ್ ಮರಳಿಸಿದ್ದಾರೆ ಎಂದರು.



