ದಾವಣಗೆರೆ: ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಾರ್ಗಿಲ್ ಮಲ್ಟಿನ್ಯಾಷನಲ್ ಕಂಪನಿ ವತಿಯಿಂದ ಸಿಎಸ್‍ಆರ್ ನಿಧಿಯಡಿ ನೀಡಲಾದ ವಿವಿಧ ವೈದ್ಯಕೀಯ ಉಪಕರಣಗಳನ್ನು ಕೊಡುಗೆ ನೀಡಲಾಗಿದೆ. ಸಂಸದ ಜಿ.ಎಂ ಸಿದ್ದೇಶ್ವರ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬುಧವಾರದಂದು ಉಪಕರಣಗಳನ್ನು ಉದ್ಘಾಟಿಸಿದರು.
ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಾರ್ಗಿಲ್ ಮಲ್ಟಿನ್ಯಾಷನಲ್ ಕಂಪನಿ ವತಿಯಿಂದ ಸಿಎಸ್‍ಆರ್ ನಿಧಿಯಡಿ ಸುಮಾರು 90 ಲಕ್ಷ ರೂ. ಮೊತ್ತದ ಫುಲ್ ಆಟೋಮೆಟಿಕ್ ಇಮಿನೊ ಡಯಾಗ್ನಸ್ಟಿಕ್ಸ್ ಸಿಸ್ಟಂ, ಆಟೋಮೆಟೆಡ್ ಬಯೋ ಕೆಮಿಸ್ಟ್ರಿ ಅನಲೈಸರ್, ಅನಸ್ತೇಷಿಯಾ ಯಂತ್ರ, ಇಸಿಜಿ ಯಂತ್ರ ವೈದ್ಯಕೀಯ ಉಪಕರಣಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸ
ದೂಢಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಮಾಜಿ ಶಾಸಕ ಬಿ.ಪಿ ಹರೀಶ್, ಡಾ. ಕುಮಾರ್, ಡಾ. ಮಂಜುನಾಥ, ಡಾ. ನಂದಕುಮಾರ, ಕಾರ್ಗಿಲ್ ಮಲ್ಟಿನ್ಯಾಷನಲ್ ಕಂಪನಿಯ ಉದೇಶ್, ಗೋಕುಲ್, ಕವನ್ ಕಾವೇರಪ್ಪ, ಪ್ರವೀಣ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.



