ಡಿವಿಜಿ ಸುದ್ದಿ, ದಾವಣಗೆರೆ : ಸಚಿವ ಜಗದೀಶ್ ಶೆಟ್ಟರ್ ಪುತ್ರ ಪ್ರಶಾಂತ್ ಶೆಟ್ಟರ್ ಹಾಗೂ ಪತ್ನಿ ಆಂಚಲ್ ಪ್ರಯಾಣಿಸುತ್ತಿದ್ದಂತ ಕಾರು ನಗರದ ಹಳೇ ಕುಂದವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತವಾಗಿದೆ.
ಈ ಕಾರು ಅಪಘಾತದಲ್ಲಿ ಸಚಿವ ಜಗದೀಶ್ ಶೆಟ್ಟರ್ ಪುತ್ರ ಹಾಗೂ ಸೊಸೆಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಚಿವ ಜಗದೀಶ್ ಶೆಟ್ಟರ್ ಪುತ್ರ ಪ್ರಶಾಂತ್ ಶೆಟ್ಟರ್ ಹಾಗೂ ಅವರ ಸೊಸೆ ಅಂಚಲ್ ದಾವಣಗೆರೆಯಿಂದ ಹುಬ್ಬಳಿ ನಿವಾಸಕ್ಕೆ ಲ್ಯಾಂಡ್ ರೋವರ್ ಕಾರಿನಲ್ಲಿ ತೆರಳುತ್ತಿದ್ದರು. ದಾವಣಗೆರೆ ನಗರದ ಹಳೆ ಕುಂದುವಾಡ ಬಳಿ ರಾಷ್ಟ್ರೀಯ ಹೆದ್ದಾರಿ 4ರ ಹತ್ತಿರ ಸಾಗುವಾಗ ಡಿವೈಡರ್ ಬಳಿ ಕೆಎ 05ಎಆರ್ 6577 ಲಾರಿಗೆ ಡಿಕ್ಕಿ ಹೊಡೆದಿದೆ.
ಲಾರಿಗೆ ಕಾರು ಡಿಕ್ಕಿಹೊಡಂದ ಪರಿಣಾಮ, ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದಂತ ಸಚಿವ ಜಗದೀಶ್ ಶೆಟ್ಟರ ಪುತ್ರ ಪ್ರಶಾಂತ್ ಶೆಟ್ಟರ್ ಹಾಗೂ ಅವರ ಪತ್ನಿ ಅಂಚಲ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಪಡೆಯುತ್ತಿದ್ದಾರೆ.ಸ್ಥಳಕ್ಕೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಪಿಎಸ್ ಐ ಕಿರಣ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.